Today: 16.Oct.2018
ರಾಜ್ಯ ಸುದ್ದಿ

ರಾಜ್ಯ ಸುದ್ದಿ (254)

ಕಾವೇರಿ ತುಲಾ ಸಂಕ್ರಮಣ

ತೀರ್ಥರೂಪಿಣಿಯಾಗಿ ಉದ್ಭವಿಸಿ ತುಂಬಿ ಹರಿಯುವ ಕಾವೇರಿ ಮಾತೆಗೆ ವಿಶೇಷ ಮಹತ್ವವಿದೆ: ಎ.ಮಂಜು

Thursday, 19 October 2017 Written by

ಹದ ಮಳೆ

ಹದ ಮಳೆ ಹಿನ್ನಲೆ ಬತ್ತಿದ್ದ ಬೋರ್ ವೆಲ್ ಗೆ ಮರುಜೀವ: ಗ್ರಾಮಸ್ಥರಲ್ಲಿ ಸಂತಸ.

Thursday, 19 October 2017 Written by

ಕಿಡಿಗೇಡಿಗಳ ಕೃತ್ಯ

Javagal : ಇಂದು ಎಲ್ಲೆಡೆ ದೀಪಾವಳಿಯ ಸಡಗರ. ಎಲ್ಲರ ಬದುಕಲ್ಲೂ ಕತ್ತಲು ಮಾಯಾವಾಗಿ ಬೆಳಕು ಆವರಿಸಲಿ ಅಂತಾ ಬೆಳಕಿನ ಹಬ್ಬವನ್ನ ಆಚರಿಸಲಾಗುತ್ತಿದೆ. ಆದ್ರೆ ಯಾರೋ ಮಾಡಿದ ದುಷ್ಕೃತ್ಯದಿಂದ ಇಲ್ಲೊಂದು ಕುಟುಂಬದಲ್ಲಿ ಕತ್ತಲು ಆವರಿಸಿದೆ. ಈ ಕೃತ್ಯ ಬರೀ ಕತ್ತಲು ಅಲ್ಲ ಅಕ್ಷರಶಃ ಆ ಕುಟುಂಬದ ಬದುಕನ್ನೇ ಕಿತ್ತುಕೊಂಡಿದೆ. ಅಷ್ಟಕ್ಕೂ ಆಗಿದ್ದೇನು ಅಂತೀರಾ..? ಈ ಮನಕಲಕುವ ದೃಶ್ಯ ನೋಡಿ ನಿಮಗೆ ಗೊತ್ತಾಗುತ್ತೆ.....

ಸಜೀವ ದಹನವಾಗಿರೋ ಜಾನುವಾರುಗಳ ಕಳೆಬರಗಳು...! ಸುಟ್ಟು ಕರಕಲಾಗಿರುವ ರೈತನ ಸಾವಿರಾರು ಕೊಬ್ಬರಿ ಕಾಯಿಗಳು..!! ಬೆಂಕಿಗೆ ಆಹುತಿಯಾಗಿರೋ ಹೊಸ ಮನೆ ಕಟ್ಟಲು ಇಟ್ಟಿದ್ದ ಸಾಮಾಗ್ರಿಗಳು..!!!

ಹೌದು.. ಇಂತದೊಂದು ಮನಕಲಕುವ ದೃಶ್ಯ ಕಂಡು ಬಂದಿದ್ದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಜಾವಗಲ್ ಸಮೀಪದ ದಿಗ್ಗೇನಹಳ್ಳಿ ಗ್ರಾಮದಲ್ಲಿ. ಹೀಗೆ ಸಜೀವ ದಹನವಾಗಿರುವ ರಾಸುಗಳ ಮುಂದೆ ಕಣ್ಣೀರಿಡುತ್ತಿರುತ್ತಾ ಕೂತಿರೋ ಬಡ ರೈತನ ಹೆಸರು ಜಯಣ್ಣ ಅಂತ. ಕೃಷಿಯ ಜೊತೆಗೆ ಜೀವನಾಧಾರಕ್ಕೆ ಮೂರು ಹಾಲು ಕರೆಯುವ ಹಸುಗಳನ್ನು ಸಾಕಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಆದ್ರೆ ಕಳೆದ ರಾತ್ರಿ ಯಾರೋ ಕಿಡಿಗೇಡಿಗಳು ಕೊಟ್ಟಿಗೆ ಮನೆಗೆ ಬೆಂಕಿಯನ್ನ ಇಟ್ಟು, ಮೂಕ ಪ್ರಾಣಿಗಳನ್ನ ನೀಷ್ಕೃರ್ಯವಾಗಿ ಕೊಂದಿದ್ದಾರೆ. ಅಷ್ಟೆಯಲ್ಲದೇ ಅವುಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕುಟುಂಬವನ್ನ ಮಾನಸಿಕವಾಗಿ ಕೊಂದು ಹಾಕಿದ್ದಾರೆ. ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಮೂರು ಹಾಲು ಕರೆಯುವ ಹಸುಗಳು ಸಜೀವ ದಹನವಾಗಿದ್ದರೆ, ರಾಶಿಗಟ್ಟಲೆ ಕೊಬ್ಬರಿ ಮತ್ತು ಮನೆಕಟ್ಟಲು ಕೂಡಿಟ್ಟಿದ್ದ ಮರಮುಟ್ಟುಗಳು ಸುಟ್ಟುಹೋಗಿವೆ.

ಇಷ್ಟೇ ಅಲ್ಲ ಕೃಷಿ ಜಮೀನಿಗೆ ನೀರು ಹಾಯಿಸಲು ತಂದಿದ್ದ ಜಟ್ ಹಾಗೂ ಪಿಯುಸಿ ಪೈಪ್ಗಳೂ ಅಗ್ನಿಗಾಹುತಿಯಾಗಿವೆ. ಇದರಿಂದ ಅಂದಾಜು 5 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದೆ. ಪಾಪ ದುಡಿಮೆಯನ್ನೇ ನಂಬಿ ಬದುಕುತ್ತಿರುವ ಜಯಣ್ಣ ಮತ್ತು ಆತನ ಪತ್ನಿ, ಚೀಟಿ ಹಣದ ಜೊತೆಗೆ ಸಂಘದಿಂದ ಸಾಲವನ್ನ ಪಡೆದು ಹಸು ಖರೀದಿ ಮಾಡಿದ್ದರು. ಹಸುಗಳ ಹಾಲಿನಿಂದ ಬಂದ ಆದಾಯದಿಂದ ಜೀವನ ಸಾಗಿಸುತ್ತಿದ್ದರು. ಈಗ ಜೀವನಾಧಾರವಾಗಿದ್ದ ಸೀಮೆ ಹಸುಗಳು ದುಷ್ಕರ್ಮಿಗಳ ಕಿಚ್ಚಿಗೆ ಬಲಿಯಾಗಿದ್ದು, ಬಡ ಕುಟುಂಬ ಅಕ್ಷರಶಃ ಕಂಗಾಲಾಗಿ ಬೀದಿಗೆ ಬಿದ್ದಿದೆ. ಜಾನುವಾರು, ಮರಮುಟ್ಟು, ಪೈಪ್, ಕೊಬ್ಬರಿ ಸೇರಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಅಗ್ನಿ ಅವಘಡದಿಂದ ಸುಮಾರು 5 ಲಕ್ಷ ರೂ. ನಷ್ಟವಾಗಿದ್ದು, ಜಿಲ್ಲಾಡಳಿತ ಮತ್ತು ಸರಕಾರ ಸೂಕ್ತ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಜಯಣ್ಣನಿಗೆ ಆಗಿರುವ ನಷ್ಟಕ್ಕೆ ಇಡೀ ಊರೇ ಮಮ್ಮಲ ಮರುಗುತ್ತಿದೆ. ದುಡಿಮೆಯನ್ನೇ ನಂಬಿ ಬದುಕುತ್ತಿರುವ ಜಯಣ್ಣ, ನನಗೆ ಯಾರೂ ಶತ್ರುಗಳೇ ಇರಲಿಲ್ಲ ಅಂತ ಹೇಳುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜಾವಗಲ್ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಶೋಧಕಾರ್ಯ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ದೀಪಾವಳಿ ದಿನದಂದೇ ಈ ರೈತನ ಮನೆಯಲ್ಲಿ ಅಂಧಾಕಾರ ಆವರಿಸಿರುವುದು ನಿಜಕ್ಕೂ ದುರಂತ.

- Kondi News,Javagal

 

Wednesday, 18 October 2017 Written by

ಕೈ ಕಟ್

ಅಪರಿಚಿತ ವಾಹನ ಡಿಕ್ಕಿ : ತುಂಡಾದ ಯುವಕನ ಬಲಗೈ

Wednesday, 18 October 2017 Written by

ಭಕ್ತರ ಮಹಾಸಾಗರ.

ಹಾಸನಾಂಬೆಗೆ 5ನೇ ದಿನವೂ ಹರಿದು ಬಂತು ಭಕ್ತ ಸಾಗರ: ಅವ್ಯವಸ್ಥೆಗೆ ಭಕ್ತರ ಇಡೀ ಶಾಪ

Tuesday, 17 October 2017 Written by

ಜಾತಿ ಸಂಘರ್ಷ

 ಅಧಿಕಾರಕ್ಕಾಗಿ ಕಾಂಗ್ರೇಸ್ ಜಾತಿಗಳ ನಡುವೆ ಸಂಘರ್ಷವನ್ನ ತಂದೊಡ್ಡುತ್ತಿದೆ: ಈಶ್ವರಪ್ಪ ಆರೋಪ.

Tuesday, 17 October 2017 Written by

ಹಾಸನಾಂಬೆ ದರ್ಶನ

ಹಾಸನಾಂಬೆಯ ದರ್ಶನ ಪಡೆದ ಮಾಜಿ ಸಚಿವ ವಿ.ಸೋಮಣ್ಣ.

Tuesday, 17 October 2017 Written by

ಆರೋಗ್ಯ ದೇಶದ ಸಂಪತ್ತು

ಒಬ್ಬ ಆರೋಗ್ಯವಾದ ವ್ಯಕ್ತಿ ದೇಶದ ಸಂಪತ್ತು: ನಾಗಭೂಷಣ ಕಮಠಾಣೆ

Tuesday, 17 October 2017 Written by

ಪ್ರತಿಭೆಗೊಂದು ವೇದಿದೆ.

ತಂತ್ರಜ್ಞಾನದ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ: ಬಸವರಾಜು

Tuesday, 17 October 2017 Written by

ಪರಂಪರಾಗತ ಶಕ್ತಿ

ಆಯುರ್ವೇದ ಪರಂಪರಾಗತವಾಗಿ ನಮ್ಮನ್ನು ಕಾಯುತ್ತಿರುವ ಶಕ್ತಿ: ಎಚ್.ಎಸ್. ಪ್ರಕಾಶ್

Tuesday, 17 October 2017 Written by
Page 8 of 19

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: