Today: 22.Jul.2018

ಮದ್ಯದಂಗಡಿ ಬೇಡ Featured

ಮದ್ಯದಂಗಡಿ ವಿರುದ್ದ ಹೊಸಕೊಪ್ಪಲು ನಿವಾಸಿಗಳ ಪ್ರತಿಭಟನೆ

13 Jul 2017 0 comment
(0 votes)
 

ಹಾಸನ, ಜು.೧೨: ನಗರದ ಹೊಸಕೊಪ್ಪಲು ಬಡಾವಣೆಯಲ್ಲಿ ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡಬಾರದೆಂದು ಆಗ್ರಹಿಸಿ ಕೆ. ಹೊಸಕೊಪ್ಪಲು ಹಾಗೂ ಎಂ. ಹೊಸಕೊಪ್ಪಲು ನಿವಾಸಿಗಳು ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಹೊಳೆನರಸೀಪುರ ರಸ್ತೆಯಲ್ಲಿರುವ ನಗರಸಭೆಯ 35ನೇ ವಾರ್ಡ ವ್ಯಾಪ್ತಿಯ ಕೆ.ಹೊಸಕೊಪ್ಪಲು ಹಾಗೂ ಎಂ. ಹೊಸಕೊಪ್ಪಲು ಬಡಾವಣೆಯಲ್ಲಿ ಮದ್ಯದಂಗಡಿ ತೆರೆಯಲು, ಪ್ರಯತ್ನ ನಡೆದಿದೆ ಎಂದು ತಿಳಿದುಬಂದಿದೆ. ಬಡಾವಣೆಯಲ್ಲಿ ಮದ್ಯದಂಗಡಿ ತೆರೆದರೆ ಸಾರ್ವಜನಿಕರ ನೆಮ್ಮದಿ ಹಾಳಾಗುತ್ತದೆ. ಆದ್ದರಿಂದ ಪರವಾನಿಗೆ ನೀಡಬಾರದೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದರು.

ಈಗಾಗಲೇ ಈ ಬಡಾವಣೆಯ ಸಮೀಪ ಮೂರ‍್ನಾಲ್ಕು ಮದ್ಯದಂಗಡಿಗಳಿದ್ದು, ಮದ್ಯಪಾನಿಗಳಿಂದ ಅಹಿತಕರ ಘಟನೆಗಳು ನಡೆಯುತ್ತಿವೆ. ಈಗ ಮದ್ಯದಂಗಡಿ ತೆರೆಯಲು ಪ್ರಯತ್ನಿಸುತ್ತಿರುವ ಜಾಗದಲ್ಲಿ ದೇವಸ್ಥಾನ, ಶಾಲೆಯಿದೆ. ಹೊಳೆನರಸೀಪುರ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ಈ ಭಾಗದಲ್ಲಿ ಯಾವ ಕಾರಣಕ್ಕೂ ಮದ್ಯದಂಗಡಿಯನ್ನು ಮಂಜೂರು ಮಾಡಬಾರದು ಹಾಗೂ ಪರವಾನಿಗೆಯಾಗಲಿ, ಎನ್.ಓ.ಸಿ. ಆಗಲಿ ನೀಡಬಾರದು. ನಮ್ಮ ಮನವಿಗೆ ಸ್ಪಂದಿಸದೆ ಪರವಾನಿಗೆ ಏನಾದರೂ ಕೊಟ್ಟರೇ ಉಗ್ರ ಹೋರಾಟ ಮಾಡುವುದಾಗಿ ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಮನವಿಯಲ್ಲಿ ಎಚ್ಚರಿಸಿದ್ದಾರೆ.

ಕೆ. ಹೊಸಕೊಪ್ಪಲು ಹಾಗೂ ಎಂ. ಹೊಸಕೊಪ್ಪಲು ನಿವಾಸಿಗಳಾದ ಹೆಚ್.ಎಂ. ರವಿ, ಜವರೇಗೌಡ, ನಾಗರಾಜು, ರಂಗಸ್ವಾಮಿ, ಬೋರೆಗೌಡ, ಸಣ್ಣತಾಯಮ್ಮ, ವಸಂತ್, ಚಿಕ್ಕಮ್ಮ ಹಾಗೂ ವಿವಿಧ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: