Today: 17.Aug.2017

ಚನ್ನಪಟ್ಟಣ ನಗರಸಭೆಗೆ Featured

ಚನ್ನಪಟ್ಟಣ ಬಡಾವಣೆ ನಗರಸಭೆ ವ್ಯಾಪ್ತಿಗೆ

ಕರ್ನಾಟಕ ಗೃಹ ಮಂಡಳಿಯಿಂದ 6 ಕೋಟಿ ರೂ.ಪಡೆದು ಬಡಾವಣೆ ವಹಿಸಿಕೊಳ್ಳಲು ನಿರ್ಧಾರ.

13 Jul 2017 0 comment
(1 Vote)
 

ಹಾಸನ, ಜು.12: ಹೊಸ ಬಸ್ ನಿಲ್ದಾಣ ಎದುರು ಇರುವ ಚನ್ನಪಟ್ಟಣ ಬಡಾವಣೆಯನ್ನು ಕರ್ನಾಟಕ ಗೃಹ ಮಂಡಳಿಯಿಂದ ನಗರಸಭೆ ಆಡಳಿತ ವ್ಯಾಪ್ತಿಗೆ ಸೇರಿಸಿಕೊಳ್ಳಲು ಹಾಸನ ನಗರಸಭೆ ತೀರ್ಮಾನ ಕೈಗೊಂಡಿದೆ.

ನಗರಸಭೆಯ ಅಧ್ಯಕ್ಷ ಹೆಚ್.ಎಸ್.ಅನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಹಾಸನ ನಗರಸಭೆಯ ವಿಶೇಷ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೆಚ್.ಎಸ್.ಅನಿಲ್‌ಕುಮಾರ್ ರವರು, ಚನ್ನಪಟ್ಟಣ ಬಡಾವಣೆಯನ್ನು ನಗರಸಭೆಗೆ ಸೇರ್ಪಡೆ ಮಾಡಿಕೊಳ್ಳಲು ಮಂಡಿಸಿದ ಪ್ರಸ್ತಾವನೆಯನ್ನು ಸಭೆಯು ಸರ್ವಾನುಮತದಿಂದ ಅನುಮೋದಿಸಿತು.

ನಗರಸಭೆಯಿಂದ ಒಪ್ಪಿಗೆ ಪತ್ರ ಸಲ್ಲಿಸಿದ ಒಂದು ವಾರದ ಒಳಗೆ ಚನ್ನಪಟ್ಟಣ ಬಡಾವಣೆಯ ಅಭಿವೃದ್ಧಿಗೆ ೬ ಕೋಟಿ ರೂ. ಅನುದಾನ ನೀಡುವುದಾಗಿ ಗೃಹ ಮಂಡಳಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ೬ ಕೋಟಿ ರೂ. ಅನುದಾನದಲ್ಲಿ ೩.೫೦ ಕೋಟಿ ರೂ. ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗೆ ೨ ಕೋಟಿ ರೂ.ಗಳನ್ನು ವೆಚ್ಚ ಮಾಡಬಹುದಾಗಿದೆ. ಈ ಎಲ್ಲಾ ಅಭಿವೃದ್ಧಿ ನಂತರ ಅಲ್ಲಿನ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಅಧ್ಯಕ್ಷ ಅನಿಲ್ ಕುಮಾರ್‌ರವರು ತಿಳಿಸಿದರು.

ನಗರಸಭೆ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ನಿವೇಶನ ಕೊಡಲು ನಗರಸಭೆ ಮುಂದಾಗಿದ್ದು, ಖರೀದಿಗಾಗಿ ಕೊರತೆ ಆಗಿರುವ ೬೩ ಲಕ್ಷಗಳನ್ನು ನಗರಸಭೆ ಭರಿಸಲು ನಿರ್ಧರಿಸಿದೆ. ಮೊದಲ ಹಂತದಲ್ಲಿ ೩೮ ಜನರಿಗೆ ವಸತಿ ನೀಡಲು ನಿವೇಶನವನ್ನು ನೀಡಲಾಗುವುದು. ಉಳಿದ ಪೌರಕಾರ್ಮಿಕರಿಗೆ ಟೀಚರ‍್ಸ್ ಕಾಲೋನಿಯಲ್ಲಿ ಕೊಡಲು ಮುಂದಾಗಿದ್ದೇವೆ. ಗುಂಟೆಗೆ ೪ ಲಕ್ಷ ರೂ.ಗೆ ಕೇಳಿದ್ದಾರೆ. ಆದರೆ ಸಂಧಾನ ನಡೆಸಿ ೩ಲಕ್ಷ ರೂ. ನೀಡಿ ಭೂಮಿ ಖರೀದಿಸಲು ಪ್ರಯತ್ನ ನಡೆದಿದೆ. ಎಂದು ಅನಿಲ್‌ಕುಮಾರ್ ಹೇಳಿದರು.

ಕಾಂಗ್ರೆಸ್ ಸದಸ್ಯ ಯಶವಂತ್‌ರವರು ಮಾತನಾಡಿ, ನಗರದ ದೊಡ್ಡಿ ರಸ್ತೆ ಪಶು ಆಸ್ಪತ್ರೆ ಸಮೀಪ ನಗರಸಭೆಗೆ ಸೇರಿದ ೭ ಸಾವಿರ ಅಡಿ ನಿವೇಶನವನ್ನು ಖಾಸಗಿ ವ್ಯಕ್ತಿಯೊಬ್ಬ ಕಬಳಿಕೆ ಮಾಡಿದ್ದಾನೆ. ನಗರದ ಇತರೆ ಜಾಗಗಳಲ್ಲಿ ಇಂತಹ ಭೂ-ಕಬಳಿಕೆ ನಡೆದಿರುವ ಬಗ್ಗೆ ಪರಿಶೀಲನೆ ನಡೆಸಿ ಕಬಳಿಕೆದಾರರಿಂದ ನಗರಸಭೆ ಜಾಗವನ್ನ ವಾಪಸ್ಸ ಪಡೆದು, ಪೌರ ಕಾರ್ಮಿಕರ ವಸತಿ ಸೌಲಭ್ಯಕ್ಕೆ ಬಳಸಿಕೊಳ್ಳಬೇಕೆಂದು ಒತ್ತಾಯಿಸಿದರು. ನಂತರ ಮಾತನಾಡಿದ ನಗರಸಭೆ ಅಧ್ಯಕ್ಷರು ನಗರದ ೩೫ ವಾರ್ಡ್‌ಗಳಲ್ಲಿ ಎಲ್ಲಾದರೂ ಜಾಗ ಒತ್ತುವರಿ ಆಗಿರುವುದು ಕಂಡು ಬಂದರೇ ನಮ್ಮ ಗಮನಕ್ಕೆ ತರಬೇಕು. ನಂತರ ಸರ್ವೆ ಮಾಡಿ ನಗರಸಭೆ ಜಾಗವನ್ನು ರಕ್ಷಣೆ ಮಾಡುವುದಾಗಿ ಯಶವಂತ್ ಪ್ರಶ್ನೆಗೆ ಉತ್ತರಿಸಿದರು.

ಇದೇ ವೇಳೆ ನಗರಸಭೆ ಉಪಾಧ್ಯಕ್ಷೆ ಲೀಲಾವತಿ ವಾಸು, ಪ್ರಭಾರಿ ಪೌರಾಯುಕ್ತ ಕೃಷ್ಣಮೂರ್ತಿ, ಇಂಜಿನಿಯರ್ ನಾಗೇಂದ್ರ, ಪ್ರೊಬೆಷನರಿ ಕೆಎಎಸ್ ಅಧಿಕಾರಿ ನಾಗರತ್ನ ಹಾಜರಿದ್ದರು.

Login to post comments

ಕ್ರೀಡಾ

ಆಕಾಶವಾಣಿ

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  install tracking codes