Today: 22.Jul.2018

ಸಂಪರ್ಕ ಸೇತುವೆ Featured

ದಶಕಗಳಿಂದ ನೆನೆಗುದಿಗೆ ಸಂಪರ್ಕ ಸೇತುವೆ ಕಾಮಗಾರಿ ಮುಕ್ತಾಯ

13 Jul 2017 0 comment
(0 votes)
 

ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಎರಡು ಜಿಲ್ಲೆಗಳ ಸಂಪರ್ಕ ಸೇತುವೆ ಕಾಮಗಾರಿ ಮುಗಿದಿದೆ. ಕೇವಲ ಒಂದು ಹೊಳೆಯಿಂದ  ಸುಮಾರು 55ಕಿಮೀನಷ್ಟು ಕ್ರಮಿಸುವ ಮೂಲಕ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಿತ್ತು. ಆದ್ರೆ ರಾಜ್ಯಸರ್ಕಾರ ತೋರಿದ ಇಚ್ಚಾಶಕ್ತಿಯಿಂದ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಹಾಗಿದ್ರೆ ಯಾವುದೀ ಸೇತುವೆ ಅಂತೀರಾ ? ಈ ಸ್ಟೋರಿ ನೋಡಿ...

ಇವತ್ತು ವಿಧಾನಸಭೆಯ ಅರ್ಜಿ ಸಮಿತಿ ತಂಡದ ಅಧ್ಯಕ್ಷ ಶಿವಶಂಕರ್ ರೆಡ್ಡಿ ಸದಸ್ಯರುಗಳಾದ ಮಡಿಕೇರಿ ಶಾಸಕ ಅಪ್ಪಜ್ಜುರಂಜನ್, ಕುಣಿಗಲ್ ಶಾಸಕ ಡಿ.ನಾಗರಾಜು ತರಿಕೇರೆ ಶಾಶಕ ಶ್ರೀನಿವಾಸ್ ಮತ್ತು ಹಾಸನ ಶಾಸಕ ಎಚ್.ಎಸ್.ಪ್ರಕಾಶ್, ಸೇರಿದಂತೆ ಹಲವರು ಇಂದು ಜಿಲ್ಲೆಯ ಗಡಿಭಾಗಕ್ಕೆ ಆಗಮಿಸಿ ಪೂರ್ಣಗೊಂಡ ಸಂಪರ್ಕ ಸೇತುವೆಯ ಕಾಮಗಾರಿಯನ್ನ ವೀಕ್ಷಣೆ ಮಾಡಿದ್ರು.

1998ರಲ್ಲಿ ಸಂಪರ್ಕ ಸೇತುವೆ ಪ್ರಸ್ತಾಪವನ್ನ ಕೊಡಗು ಶಾಸಕ ಹಾಗೂ ಹಾಸನದ  ಅಂದಿನ ಬಿಬಿ ಶಿವಪ್ಪ ಸರ್ಕಾರದ ಗಮನಕ್ಕೆ ತಂದ್ರು. ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಇದಕ್ಕೆ ಅನುಮೋದನೆ ಕೊಟ್ಟಿದ್ರು. ಆದ್ರೆ ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಹಿಂದಿನ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರದ ಇಚ್ಚಾಶಕ್ತಿ ಕೊರತೆಯಿಂದ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಈ ಸೇತುವೆ ಹಾಸನ ಮತ್ತು ಕೊಡಗು ಜಿಲ್ಲೆಗಳನ್ನ ಸಂಪರ್ಕ ಮಾಡುವ ಸೇತುವೆಯಾಗಿದೆ. ಕೇವಲ 300ಮೀಟರ್ ಉದ್ದದ ಸೇತುವೆ 17ವರ್ಷದಿಂದ ನೆನೆಗುದಿಗೆ ಬಿದ್ದಿದ್ದೆ. ಆದ್ರೆ ಸದ್ಯ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ಗುಣಮಟ್ಟ ಉತ್ತಮವಾಗಿಲ್ಲದಿದ್ದರೂ ಸದ್ಯ ಸಂಪರ್ಕಕ್ಕೆ ಯಾವುದೇ ತೊಂದರೆಯಾಗದಂತೆ ಪೂರ್ಣಗೊಳಿಸಲಾಗಿದೆ. ಇದ್ರಿಂದ ಎರಡು ಜಿಲ್ಲೆಗಳ ವ್ಯಾಪಾರಾಭಿವೃದ್ದಿ ವೃದ್ದಿಗೊಳ್ಳಲಿದೆ.

17 ವರ್ಷದ ಹಿಂದೆ ಪ್ರಾರಂಭವಾದ ಸೇತುವೆ ಕಾಮಗಾರಿ ಕಾರ್ಯ ವಿಳಂಬವಾಗಿತ್ತು ಎಂಬ ದೂರುಗಳು ಬಂದಿದ್ದ ಹಿನ್ನಲೆಯಲ್ಲಿ ನಾವು ಅರ್ಜಿ ಸಮಿತಿಯಿಂದ ಸಭೆ ಮಾಡಿ ಅಧಿಕಾರಿಗಳನ್ನ ಕರೆಸಿ ಸಭೆ ಮಾಡಿ ಪೂರ್ಣಗೊಳಿಸಬೇಕೆಂದು ಸೂಚನೆನೀಡಲಾಗಿತ್ತು. ಹಾಗಾಗಿ ಸದ್ಯ ಕಾಮಗಾರಿ ಪೂರ್ಣಗೊಂಡಿದೆ. ಎರಡು ಜಿಲ್ಲೆಗಳ ಮಧ್ಯ ನದಿ ಹಾದುಹೋಗಿರುವುದರಿಂದ ಪ್ರಯಾಣಿಸಲು ದುಸ್ತರವಾಗಿತ್ತು. ಈ ಸಂಪರ್ಕ ಸೇತುವೆಯಾದ ಬಳಿಕ ಜಿಲ್ಲೆಗಳ ಬಾಂಧವ್ಯ ಕೂಡಾ ಹೆಚ್ಚಾಗಲಿದೆ. 300ಮೀಟರ್ ಉದ್ದದ ಸೇತುವೆಗೆ 2.36ಕೋಟಿ ವ್ಯಚ್ಚದಲ್ಲಿ ನಿರ್ಮಾಣವಾಗಿದೆ.

ಹಾಸನದಿಂದ ಕೊಡಗು ಜಿಲ್ಲೆಗೆ ಹೋಗಬೇಕಾದ್ರೆ ಸಕಲೇಶಪುರ, ಬಾಳ್ಳುಪೇಟೆ ಅಥವಾ ಕೊಡ್ಲಿಪೇಟೆ ಮಾರ್ಗವಾಗಿ ಸುಮಾರು 55ಕಿ.ಲೋ ಮೀಟರ್ ಕ್ರಮಿಸಿ ಹೋಗಬೇಕಿತ್ತು. ಕೊಡಗು ಮತ್ತು ಹಾಸನದ ಜಿಲ್ಲೆಗಳ ಮಧ್ಯೆ ಹೇಮಾವತಿ ನದಿ ಹಾದುಹೋಗಿರುವುದರಿಂದ ಹಾಸನದಿಂದ ಬಾಳ್ಳುಪೇಟೆ, ರಾಯರಕೊಪ್ಪಲು, ಮಗ್ಗೆ, ಹೀಗೆ ಬೇರೆ ಬೇರೆ ಗ್ರಾಮಗಳ ಮೂಲಕ ಹೋಗಬೇಕಾಗಿತ್ತು. ಆದ್ರೆ ಈ ಸೇತುವೆಯಾದ ಬಳಿಕ ನಾವು 40 ಕಿ.ಮೀ.ಅಂತರವಾಗಿದೆ. ಉದ್ಘಾಟನೆಗೆ ಸಿದ್ದವಾಗಿರೋ ಈ ಸೇತುವೆ ಗುಣಮಟ್ಟದಿಂದ ಕೂಡಿಲ್ಲ. ಈ ಬಗ್ಗೆ ಮತ್ತೆ ಅರ್ಜಿ ಸಮಿತಿಗೆ ದೂರು ನೀಡಲಾಗಿದೆ. ಸಂಪರ್ಕ ಸೇತುವೆಯಿಂದ ಈ ಭಾಗದ ಸುಮಾರು 40 ಹಳ್ಳಿಗಳಿಗೆ ಉಪಯೋಗವಾಗುವ ಜೊತೆಗೆ ವ್ಯಾಪಾರವೂ ಅಭಿವೃದ್ದಿಯಾಗಲಿದೆ. ಗುಣಮಟ್ಟಕ್ಕಿಂತ ಸದ್ಯ ಪೂರ್ಣವಾಯ್ತಲ್ಲ ಎಂಬ ಆಶಯ ಈ ಭಾಗದ ಜನರದ್ದು.

ಒಟ್ಟಾರೆ ಒಂದುವರೆ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿಲ್ಲದಿದ್ದರೂ ಸಾರ್ವಜನಿಕರ ಸೇವೆಗೆ ಸಿದ್ದವಾಗಿದೆ. ಕಾಮಗಾರಿ ವಿಳಂಬಕ್ಕೆ ಹಿಂದಿನ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರದ ಇಚ್ಚಾಶಕ್ತಿ ಕೊರತೆ ಕೂಡಾ ಎಂದ್ರೆ ತಪ್ಪಾಗಲ್ಲ. ಸದ್ಯ ರಾಜ್ಯ ಸರ್ಕಾರ ಎರಡು ಜಿಲ್ಲೆಗಳ ವಾಸ್ತವತೆಯನ್ನ ಅರಿತು ಪೂರ್ಣಗೊಳಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

- ಆನಂದ್ ಚನ್ನಹಳ್ಳಿ, ಹಾಸನ

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: