Today: 22.Jul.2018

ಅಕ್ರಮ ಮನೆ ನೆಲಸಮ Featured

ಜೆಸಿಬಿ ಆರ್ಭಟ-ಅಕ್ರಮ ಮನೆ ನೆಲಸಮ

19 Jul 2017 0 comment
(0 votes)
 

ಹಾಸನ-17..07.2017: ಯಾವುದೋ ಕಾಡಿನಂಚಿನಲ್ಲಿ ಒತ್ತುವರಿ ಮಾಡಿಕೊಳ್ಳೋದನ್ನ ನೋಡಿದ್ದೇವೆ.. ಇನ್ಯಾವ್ದೋ ವಾರಸುದಾರರು ಇಲ್ಲದ ಜಾಗದಲ್ಲಿ ಹೋಗಿ ಬೇಲಿ ಹಾಕೊಳೋದನ್ನ ಕೂಡ ನೋಡಿದ್ದೇವೆ.. ಆದರೆ ಶಾಲೆಯ ಮೈದಾನದಲ್ಲೇ ಅಕ್ರಮವಾಗಿ ಮನೆಗಳನ್ನ ನಿರ್ಮಾಣ ಮಾಡಿರುವುದನ್ನ ಎಲ್ಲದ್ರೂ ನೋಡಿದ್ದೀರಾ.. ಯೆಸ್... ಇಂತದೊಂದು ಮಹಾನ್ ಮೋಸ ಹಾಸನ ನಗರದಲ್ಲೇ ನಡೆದಿದೆ..!! ಕೊನೆಗೆ ಇದು ಜನರಿಗೆ ಮಕ್ಮಲ್ ಟೋಪಿ ಹಾಕಿ ಮಾಡಿದ ಮನೆಗಳು ಅಂತಾ ಗೊತ್ತದಾಗ, ಕಟ್ಟಿದ್ದ ಮನೆಗಳು ಹಾಗೆ ಕುಸಿದುಬಿದ್ದಿದೆ.. ಹೇಗೆ ಅಂತೀರಾ..? ಇಲ್ಲಿದೆ ನೋಡಿ ಡಿಟೇಲ್ಸ್..

ಈಗಷ್ಟೇ ನಿರ್ಮಾಣವಾಗಿದ್ದ ಮನೆಗಳ ಮೇಲೆ ಜೆಸಿಬಿಯ ಆರ್ಭಟ.. ! ಇನ್ನೇನು ಗೃಹಪ್ರವೇಶವಾಗಬೇಕು ಅನ್ನುವಷ್ಟರಲ್ಲಿ ಕುಸಿದ ಬಿದ್ದ ಮನೆಗಳು..!! ಕಕ್ಕಾಬಿಕ್ಕಿಯಾಗಿ ಹೊಸ ಮನೆಗಳನ್ನ ಧ್ವಂಸ ಮಾಡುತ್ತಿರುವುದನ್ನ ನೋಡುತ್ತಿರುವ ಜನ..!!! ಅಂದಾಗೆ ಈ ದೃಶ್ಯ ಕಂಡುಬಂದಿದ್ದು ಹಾಸನದ ವಿಶ್ವನಾಥನಗರದ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ.. ಯಾರೋ ಪುಣ್ಯಾತ್ಮನೊಬ್ಬ ಶಾಲೆಯ ಮೈದಾನದಲ್ಲಿ ಅಂಗನವಾಡಿಯನ್ನ ಕಟ್ಟುತ್ತೇವೆ ಅಂತಾ ಮೈದಾನದ ಮಧ್ಯೆಯೇ ರಾಜಾರೋಷವಾಗಿ ಕಾಂಪೌಂಡ್ ಹಾಕಿ ಎರಡು ಮನೆಗಳನ್ನ ನಿರ್ಮಿಸಿದ್ದ..  ಮೊದಲಿಗೆ ಅಂಗನವಾಡಿ ಅಂತಾ ಹೇಳಿದಾಗ ಯಾರಿಗೂ ಅನುಮಾನ ಬಂದಿರಲಿಲ್ಲ. ಆದರೆ ಒಳಗಡೆ ಹೋಗಿ ನೋಡಿದಾಗ ತಲಾ ಎರಡು ಮನೆಯಲ್ಲೂ ಎರಡೆರಡು ಬೆಡ್​ ರೂಂ, ಹಾಲ್, ದೇವರ ಕೋಣೆ, ಅಡಿಗೆ ಕೋಣೆ, ಬಾತ್ ರೂಂ ಗಳನ್ನ ಕಂಡು ಸ್ಥಳೀಯರೇ ಶಾಕ್ ಆಗಿದ್ದಾರೆ.. ಹಾಗಾಗೀ ಮೊನ್ನೆಯೇ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ರು, ಸುದ್ದಿ ತಿಳಿದ ನಗರಸಭೆ ಅಧ್ಯಕ್ಷ ಅನಿಲ್ ಕುಮಾರ್ ಎರಡು ಮನೆಗಳನ್ನ ಧ್ವಂಸ ಮಾಡುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಇಂದು ಹೊಸದಾಗಿ ಕಟ್ಟಿದ ಎರಡು ಮನೆಗಳನ್ನ ಜೆಸಿಬಿ ಮೂಲಕ ನೆಲಸಮು ಮಾಡಲಾಯ್ತು.

ವಿಪರ್ಯಾಸ ಅಂದ್ರೆ ಅಂಗನವಾಡಿ ಅಂತಾ ಶಾಲೆಯ ಮೈದಾನದಲ್ಲೇ ಎರಡು ಮನೆಗಳನ್ನ  ನಿರ್ಮಿಸಿದ್ರೂ, ಇದನ್ನ ಯಾರು ಕಟ್ಟಿಸ್ತಾ ಇದ್ದಾರೆ ಅನ್ನೋ ಮಾಹಿತಿಯೇ ಯಾರಿಗೂ ಇಲ್ಲ.. ಆದಾಗ್ಯೂ ಇಲ್ಲಿನ ಸ್ಥಳೀಯರು ಈ ವಾರ್ಡಿನ ನಗರಸಭೆ ಸದಸ್ಯೆ ಶುಭಾ ದಿನೇಶ್ ಅವರ ಸಹೋದರ ಕ್ರಾಂತಿ ಪ್ರಸಾದ್ ಕಟ್ಟಿಸುತ್ತಿದ್ದಾನೆ ಅಂತಾ ಆರೋಪಿಸಿದ್ರು.. ಆದ್ರೆ ಈ ಅಕ್ರಮ ಕಟ್ಟಡಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ಕೆಲವರ ಕುಮ್ಮಕ್ಕಿನಿಂದ ನನ್ನ ವಿರುದ್ಧ ಆರೋಪಿಸಿದ್ದಾರೆ ಅನ್ನೋದು ಕ್ರಾಂತಿ ಪ್ರಸಾದ್ ಸಮಾಜಾಯಿಷಿ..

ಇನ್ನೂ ವಿಚಿತ್ರ ಅಂದರೆ ಮಕ್ಕಳು ಆಟವಾಡುವುದಕ್ಕೆ ಇದ್ದ ಶಾಲೆಯ ಮೈದಾನದಲ್ಲೇ ಎರಡು ಮನೆಗಳು ನಿರ್ಮಾಣವಾಗಿದ್ರೂ ಕೂಡ ಸಂಬಂಧಪಟ್ಟ ಇಲಾಖೆಗೂ ಈ ಬೆಳವಣಿಗೆ ಗೊತ್ತಿಲ್ಲ ಅನ್ನೋದು. ಈ ವಿಚಾರ ನಿಜಕ್ಕೂ ಗೊತ್ತೆ ಇಲ್ವೋ ಅಥವಾ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಮೇಲೆ ಅಧಿಕಾರಿಗಳು ಈ ನಾಟಕವಾಡ್ತಿದ್ದಾರೋ ಅನ್ನೋದನ್ನ ದೇವರೇ ಬಲ್ಲ..  ಅದೇನೆ ಇರಲಿ, ಹಾಸನ ನಗರದಲ್ಲಿ ಅದು ಸರ್ಕಾರಿ ಶಾಲೆಯ ಮೈದಾನದಲ್ಲೇ ಹೀಗೆ ಮನೆಗಳನ್ನ ಕಟ್ಟುವುದಕ್ಕೆ ಮನಸ್ಸು ಮಾಡಿದ ಆ ಅನಾಮಿಕ ವ್ಯಕ್ತಿ ಅದೆಂಥಾ ಕ್ರಿಮಿನಲ್ ವ್ಯಕ್ತಿ ಇರಬೇಕು. ಒಟ್ಟಾರೆ ಸರ್ಕಾರಿ ಶಾಲೆಯ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಲು ಹೋಗಿ ಮಂಗಳಾರತಿ ಮಾಡಿಸಿಕೊಂಡ ಭೂಪನಿಗೆ ತಕ್ಕ ಶಾಸ್ತಿಯಾಗಿರೋದಂತೂ ಸತ್ಯ..

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: