Today: 15.Dec.2017

ಗಬ್ಬು ನಾರುತ್ತಿದೆ ಆಸ್ಪತ್ರೆ Featured

ಆಸ್ಪತ್ರೆಗೆ ಬೇಕಿದೆ ಮೂಲ ಸೌಕರ್ಯದ ಚಿಕಿತ್ಸೆ

26 Jul 2017 0 comment
(0 votes)
 

 

ರೋಗಿಗಳಿಗೆ ಗುಣಪಡಿಸೋ ಈ ಆಸ್ಪತ್ರೆಗೆ ಬೇಕಿದೆ ಮೂಲ ಸೌಕರ್ಯದ ಚಿಕಿತ್ಸೆ. ಸಿಬ್ಬಂದಿ, ವೈದ್ಯರ ಕೊರತೆಯಿಂದ ಕಾಡುತ್ತಿರೋ ಆಸ್ಪತ್ರೆಯಲ್ಲಿ ಕುಡಿಯಲು ನೀರಿಲ್ಲದಿದ್ರು, ಮಧ್ಯದ ಪಾಕೀಟುಗಳಿಗೇನು ಕಮ್ಮಿಯಿಲ್ಲ. ಹಾಗಿದ್ರೆ ಯಾವುದೀ ಆಸ್ಪತ್ರೆ ? ಎಲ್ಲಿದೆ ಅಂತೀರಾ ? ಈ ಸ್ಟೋರಿ ನೋಡಿ....

ಹಾಸನ ಅಂದ್ರೆ ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯೆಂದೆ ಪ್ರಸಿದ್ದಿ ಪಡೆದಿದೆ. ಪ್ರತಿ ಬಜೆಟ್ ನಲ್ಲಿಯೂ ಯಾವುದಾದರೊಂದು ಅನುದಾನ ಹಾಸನಕ್ಕೆ ಇದ್ದೆ ಇರುತ್ತೆ. ಹಾಸನದ ಬಸ್ ನಿಲ್ದಾಣ ದೇಶಕ್ಕೆ ಮಾದರಿಯಾದ್ರೆ, ನಗರ ಬಸ್ ನಿಲ್ದಾಣ ರಾಜ್ಯಕ್ಕೆ ಮಾದರಿ. ಇನ್ನು ಆಸ್ಪತ್ರೆ ಬಗ್ಗೆ ಮಾತನಾಡೋದಾದ್ರೆ 500 ಹಾಸಿಗೆಯನ್ನ ಹೊಂದಿರೋ 7 ಅಂತಸ್ತಿನ ಬೃಹತ್ ದೊಡ್ಡ ಆಸ್ಪತ್ರೆ ಹಾಸನದಲ್ಲಿದೆ. ಆದ್ರೆ ಜಿಲ್ಲೆಯ ಬರಪೀಡಿತ ತಾಲ್ಲೂಕಾದ ಅರಸೀಕೆರೆ ಇದಕ್ಕೆ ವಿರುದ್ದವಾಗಿದೆ. ತಾಲ್ಲೂಕಿಗೆ ದೊಡ್ಡ ಆಸ್ಪತ್ರೆಯಿದ್ರು ವೈದ್ಯರ ಕೊರತೆ ಸಾಕಷ್ಟಿದೆ. ಶೌಚಗುಂಡಿ ಹೊಡೆದು ದುರ್ನಾಥ ಬೀರುತ್ತಿದ್ದರೂ ಅದನ್ನ ಸ್ಪಚ್ಚಗೊಳಿಸುವ ಗೋಜಿಗೆ ಹೋಗಿಲ್ಲ ಇಲ್ಲಿನ ಸಿಬ್ಬಂದಿ. ಯಾಕಂದ್ರೆ ಸಿಬ್ಬಂದಿ ಇರೋದು ಕೂಡಾ ಬೆರಳೆಣಿಕೆಯಷ್ಟು ಮಾತ್ರ. ಹಾಗಾಗಿ ತಾಲ್ಲೂಕು ಆಡಳಿತವಾಗಲೀ, ನಗರಸಭೆಯಾಗಲೀ, ಇತ್ತ ಗಮನಹರಿಸದೇ ಇರುವುದರಿಂದ ರೋಗಿಗಳಿಗೆ ಆತಂಕ ಶುರುವಾಗಿದೆ. ರೋಗವನ್ನ ದೂರ ಮಾಡಿಕೊಳ್ಳಲು ಆಸ್ಪತ್ರೆಗೆ ಬಂದ್ರೆ, ಅನೈರ್ಮಲ್ಯದಿಂದ ಕೂಡಿರೋ ಆಸ್ಪತ್ರೆಯಿಂದ ಮತ್ತಷ್ಟು ರೋಗಗಳು ಹರಡುತ್ತದೆಂದು ಭಯದ ವಾತಾವರಣ ಸೃಷ್ಠಿಯಾಗಿದೆ. ಗುತ್ತಿಗೆ ಪಡೆದ ಗುತ್ತಿಗೆದಾರನಾಗಲೀ, ನಗರಸಭೆಯಾಗಲೀ, ಸ್ವಚ್ಚಗೊಳಿಸುವ ಕಾರ್ಯಕ್ಕೆ ಮುಂದಾಗದಿರುವುದು ಶೋಚನೀಯ ಸಂಗತಿ.

ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ವೈದ್ಯರನ್ನೊಳಗೊಂಡತೆ ಸುಮಾರು 18 ಹುದ್ದೆಗಳು ಭರ್ತಿಯಾಗಬೇಕಿದೆ. ವೈದ್ಯರ ಕೊರತೆ ಕಾಡುತ್ತಿದೆ. ವೈದ್ಯಕೀಯ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ಖಾಸಗಿ ಆಸ್ಪತ್ರೆಗೆ ಮುಖ ಮಾಡುತ್ತಿರುವುದು ಇದಕ್ಕೆ ಬಹುಮುಖ್ಯ ಕಾರಣ. ಡಯಾಲೀಸಿಸ್ ಕೇಂದ್ರವಿದೆ. ಆದ್ರೆ ಅದಕ್ಕೆ ವೈದ್ಯರಿಲ್ಲದೇ ಸ್ಟಾಫ್ ನರ್ಸ ಗಳೇ ನಿರ್ವಹಣೆ ಮಾಡ್ತಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಡಯಾಲೀಸಿಸ್ ಕೇಂದ್ರವನ್ನ ಖಾಸಗಿಯವರಿಗೆ 4 ತಿಂಗಳ ಹಿಂದೆಯೇ ಗುತ್ತಿಗೆ ನೀಡಿದೆ. ಆದ್ರೆ ಖಾಸಗಿಯವರು ಇದುವರೆವಿಗೂ ಯಾವುದೇ ವ್ಯದ್ಯರನ್ನ ಕೇಂದ್ರಕ್ಕೆ ನೇಮಿಸಿಲ್ಲ.

ಆಸ್ಪತ್ರೆಯಂದ್ರೆ ಸ್ವಚ್ಚವಾಗಿ ಕಂಗೊಳಿಸಬೇಕು. ರೋಗಿಗಳಿಗೆ ಪ್ರತನಿತ್ಯ ಬೆಟ್ ನೀಡುವುದರಿಂದ ಹಿಡಿದು ಊಟ ನೀಡುವ ತನಕ ಶುಚಿತ್ವವನ್ನ ಕಾಪಾಡಿಕೊಳ್ಳುವುದು ಆಸ್ಪತ್ರೆಯ ಕರ್ತವ್ಯ. ಆದ್ರೆ ಮಲಗುವ ಬೆಡ್ ಇರಲೀ, ಕುಡಿಯುವ ನೀರಿಗೂ ಈ ಈ ಆಸ್ಪತ್ರೆಯಲ್ಲಿ ಸಿಗುವುದಿಲ್ಲ. ನೀರಿಗಾಗಿ ಈಗಾಗಲೇ ಎರಡು ದೊಡ್ಡ ಟ್ಯಾಂಕ್ ಇದೆ. ನಗರಕ್ಕೂ ಹಾಗೂ ಆಸ್ಪತ್ರೆಗೂ ಪೂರೈಕೆಯಾಗಲಿದೆ. ಆದ್ರೆ ಅದನ್ನ ಶುಚಿಗೊಳಿಸಿ ದಶಕಗಳೇ ಕಳೆದಿವೆಯಂತೆ. ಇನ್ನು ಇದ್ರ ಪಕ್ಕದಲ್ಲಿಯೇ ಕುಡಿಯುವ ನೀರಿಗಾಗಿ 3 ಟ್ರಮ್ ಇಡಲಾಗಿದೆ. ಆದ್ರೆ ನೆಪಮಾತ್ರಕ್ಕೆ ಅಷ್ಟೆ. ಹೀಗಾಗಿ ನೀರಿನ ಸಮಸ್ಯೆ ಸಾಕಷ್ಟಿದೆ. ಇನ್ನು ವಾರ್ಡನ ಕಿಟಕಿ ಬಳಿ ಕ್ಯಾಮರಾ ಕಣ್ಣಯಿಸಿದಾಗ ಕುಡಿದು ಬಿಸಾಡಿರೋ ಮದ್ಯದ ಬಾಟಲ್, ಪ್ಯಾಕೇಟ್ ಗಳು ನಮ್ಮ ಸುದ್ದಿ ಟಿವಿಯ ಕ್ಯಾಮರಾ ಕಣ್ಣಿಗೆ ಸೆರೆಯಾದವು. ಅಂದ್ರೆ ರಾತ್ರಿಯ ಸಮಯದಲ್ಲಿ ಇಲ್ಲಿ ಮದ್ಯದ್ಯ ಪೂರೈಕೆಯಾಗುತ್ತಾ ಎಂಬ ಅನುಮಾನ ಕೂಡಾ ಕಾಡ್ತಿದೆ. ಸ್ಥಳೀಯ ಶಾಸಕ ಜೆಡಿಎಸ್ ನ ಶಿವಲಿಂಗೇಗೌಡ ಕೇವಲ ಕಾಮಗಾರಿ ಶಾಸಕ. ಸಾವಿರಾರು ಕೋಟಿ ರೂ.ನಲ್ಲಿ ನೀರಿಗೆ ಅನುದಾನ ಕೊಡಿಸಿದ್ದೇನೆಂಬ ಜಂಬಕೊಚ್ಚಿಕೊಳ್ಳುವವರು ಮಾತ್ರೆ ನುಂಗಲು ನೀರನ್ನ ಕೊಡದಿರುವುದು ವಿಪರ್ಯಾಸವೇ ಸರಿ. ಆಸ್ಪತ್ರೆಗೆ ಬರುವಂತಹ ಸೌಲಭ್ಯವನ್ನ ಕಮಿಷನ್ ದಂದೆಗೆ ಬಿದ್ದು ಬೇರೆಡೆಗೆ ಕಳಿಸ್ತಾರೆ. ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದೆ ಆಸ್ಪತ್ರೆ ಅದೋಗತಿಯಲ್ಲಿರುವುದಕ್ಕೆ ಮುಖ್ಯ ಕಾರಣ ಎಂಬುದು ಸ್ಥಳೀಯ ಹೋರಾಟಗಾರರ ಆರೋಪ.

ಇನ್ನು ಆಸ್ಪತ್ರೆಯ ನರ್ಸಗೆ ಸರಿಯಾದ ರಜೆ ನೀಡೋದಿಲ್ಲವಂತೆ. ರಾತ್ರಿಪಾಳಯದಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗೆ, ಸ್ಟಾಫ್ ನರ್ಸಗಳಿಗೆ ಭದ್ರತೆಯಿಲ್ಲ. ನಮ್ಮ ಕುಟುಂಬದ ಕಾರ್ಯಕ್ರಮಗಳಿಗೆ ಹೋಗದೇ ಇಲ್ಲಿ ಕರ್ತವ್ಯ ನಿರ್ವಹಣೆ ಮಾಡ್ತಿದ್ದೇವೆ. ಡಯಾಲಿಸ್ ಗೂ ನಾವೇ ಕರ್ತವ್ಯ ನಿರ್ವಹಣೆ ಮಾಡ್ತಿದ್ದೇವೆ.ಆದ್ರೂ ಕೂಡಾ ಹೆಚ್ಚು ಗೌರವ ನೀಡುತ್ತಿಲ್ಲ. ಎರಡು ವರ್ಷಗಳಿಂದ ನಮ್ಮ ಸಮಸ್ಯೆ ಕೇಳುವವರೇ ಇಲ್ಲಾ.

ಆದ್ರೆ ವೈದ್ಯರ ಪ್ರಕಾರ ನಮ್ಮ ಆಸ್ಪತ್ರೆಯಲ್ಲಿ ಡಯಾಲೀಸಿಸ್ ಕೇಂದ್ರಕ್ಕೆ ಯಾವುದೇ ಸಿಬ್ಬಂದಿಯಿಲ್ಲ. ಸದ್ಯ ಇಲ್ಲಿರುವ ನರ್ಸಗಳನ್ನೆ ಬಳಸಿಕೊಳ್ಳುತ್ತಿದ್ದೇವೆ. ಪ್ರತಿನಿತ್ಯ 300ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ ಡಯಾಲೀಸಿಸ್ ಗೆ ಸಾಕಷ್ಟು ಫಲಾನುಭವಿಗಳಿದ್ದಾರೆ. ಆದ್ರೆ ಅದ್ಕೆ ಬೇಕಾದ ಹೆಚ್ಚಿನ ಬೆಟ್ ಗಳಿಲ್ಲ. ವೈದ್ಯರಕೊರತೆಯೂ ಇದೆ. ಜಾಗದ ಕೊರತೆಯೂ ಇದೆ. ಮಧ್ಯಾಹ್ನದ ಊಟವನ್ನ ಸಹ ಸದ್ಯ ಸ್ಥಗಿತಗೊಳಿಸಲಾಗಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.

ಒಟ್ಟಾರೆ ಸದ್ಯ ಮಾನವೀಯ ದೃಷ್ಠಿಯಿಂದ ನಗರಸಭೆ ನೀರಿನ ಪೂರೈಕೆ ಮಾಡಲು ಸನ್ನದ್ದವಾಗಿದೆ. ಆದ್ರೆ ರೋಗವನ್ನ ದೂರ ಮಾಡುವ ಆಸ್ಪತ್ರೆಯಲ್ಲಿಯೇ ರೋಗಗ್ರಸ್ಥ ಲಕ್ಷಣಗಳು ಸಾಕಷ್ಟಿವೆ. ಹಾಗಾಗಿ ತುರ್ತಾಗಿ ಆಸ್ಪತ್ರೆಯ ಮೂಲ ಸೌಕರ್ಯಕ್ಕೆ ಚಿಕಿತ್ಸೆ ನೀಡಬೇಕಿದೆ. ಸರ್ಕಾರ ಸಾಕಷ್ಟು ಸೌಲಭ್ಯಗಳನ್ನ ಒದಗಿಸುತ್ತಿದೆ. ಅದನ್ನ ಬಳಕೆ ಮಾಡಿಕೊಳ್ಳಬೇಕಾದ ಮಾರ್ಗ ಮಾತ್ರ ಅಧಿಕಾರಿಗಳಿಗೆ ತಿಳಿದಿಲ್ಲ. ಎಲ್ಲದಕ್ಕೂ ನಿರ್ಲಕ್ಷ್ಯವೇ ಕಾರಣ ಎಂಬುದು ಸಾರ್ವಜನಿಕರ ಆರೋಪ. ಮುಂದಿನ ದಿನದಲ್ಲಿ ಇದು ನಮ್ಮ ಆಸ್ಪ್ರತೆಯೆಂಬ ಕಾಳಜಿಯಿಂದ ಸೌಕರ್ಯವನ್ನ ಬಳಕೆ ಮಾಡಿಕೊಳ್ಳಲು ವೈದ್ಯರು ಮತ್ತು ಸಿಬ್ಬಂಧಿಗಳು ಮುಂದಾಗುತ್ತಾರಾ ಕಾದುನೋಡಬೇಕಿದೆ.

Last modified on Wednesday, 26 July 2017 05:35
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: