Today: 23.Sep.2018

ಮಳೆ ನೀರು ಆರೋಗ್ಯಕರ Featured

ಮಳೆನೀರು ಬಳಕೆಯಿಂದ ಆರೋಗ್ಯ ವೃದ್ಧಿ: ಡಾ. ವಿಜಯ ಅಂಗಡಿ

08 Oct 2017 0 comment
(0 votes)
 

ಬಿಈಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಸಂಸ್ಥಾಪನಾ ದಿನಾಚರಣೆ

ಹಾಸನ, ಅ.8- ಮಳೆಯು ಇಳೆಗೆ ದೇವರು ಕೊಟ್ಟ ವರ. ಅದನ್ನು ಸದುಪಯೋಗಪಡಿಸಿಕೊಂಡಾಗ ಪರಿಸರದ ಉಳಿವು ಸಾಧ್ಯ ಎಂದು ಹಾಸನ ಆಕಾಶವಾಣಿ ಕೃಷಿ ವಿಭಾಗದ ಮುಖ್ಯಸ್ಥ ಡಾ. ವಿಜಯ ಅಂಗಡಿ ಹೇಳಿದರು.

ನಗರದ ಶ್ರೀಮತಿ ಬಿಳಿಯಮ್ಮ ಈರೇಗೌಡ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಎನ್‌ಎಸ್‌ಎಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಳೆನೀರು ಕೊಯ್ಲು ಮತ್ತು ಸಂಗ್ರಹ ವ್ಯವಸ್ಥೆಯಿಂದ ನೀರಿನ ಕೊರತೆ ಸಮಸ್ಯೆ ನಿವಾರಿಸಬಹುದಾಗಿದೆ ಎಂದರು.

ಪರಿಸರ ಮಾಲಿನ್ಯದಿಂದಾಗಿ ಇಂದು ಕೊಳವೆಬಾವಿಗಳ ನೀರು ಸಹ ಕಲುಷಿತಗೊಂಡಿದೆ. ನಾವು ಇಂದು ಎದುರಿಸುತ್ತಿರುವ ಅನೇಕ ರೋಗಗಳಿಗೆ ನೀರೇ ಕಾರಣ. ಮಳೆನೀರು ಸಂಗ್ರಹದಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮಳೆನೀರು ರೋಗನಿರೋಧಕ ಶಕ್ತಿ ಹೊಂದಿದ್ದು, ಅನೇಕ ಜೀವಸತ್ವಗಳಿಂದ ಕೂಡಿರುತ್ತದೆ. ಆದ್ದರಿಂದ ಮಳೆನೀರನ್ನು ಸಂಗ್ರಹಿಸಿ ಉಪಯೋಗಿಸಬೇಕು ಎಂದು ಸಲಹೆ ಮಾಡಿದರು.

ಮಳೆನೀರಿನಿಂದ ತಯಾರಿಸಿದ ಆಹಾರ ತುಂಬಾ ರುಚಿಯಾಗಿರುತ್ತದೆ. ಮಳೆನೀರಿನಲ್ಲಿ ಸ್ನಾನ ಮಾಡುವುದರಿಂದ ಮತ್ತು ಬಟ್ಟೆಗಳನ್ನು ಒಗೆಯುವುದರಿಂದ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ಮಳೆನೀರನ್ನು ಬಹುದೀರ್ಘ ಕಾಲದವರೆಗೆ ಯಾವುದೇ ಕಶ್ಮಲಗಳಿಲ್ಲದಂತೆ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಇಂದಿನ ಯುವಜನರು ಮೊಬೈಲ್ ಬಳಕೆಯ ದಾಸರಾಗುತ್ತಿದ್ದು, ಸಮಾಜ ಮತ್ತು ದೇಶದ ಬೆಳವಣಿಗೆಯಲ್ಲಿ ಅವರ ಪಾತ್ರ ನಗಣ್ಯವಾಗುತ್ತಿದೆ. ದುಶ್ಚಟಗಳಿಂದ ದೂರವಿದ್ದು ಉತ್ತಮ ಬದುಕು ರೂಪಿಸಿಕೊಳ್ಳುವುದರ ಜೊತೆಗೆ ದೇಶದ ಪ್ರಗತಿಗೂ ಕೊಡುಗೆ ನೀಡಬೇಕು ಎಂದು ತಿಳಿಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಿ.ಈ. ಜಗದೀಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಸ್ತು ಬಹಳ ಮುಖ್ಯ. ಸಮಯದ ಸದ್ಬಳಕೆ ವಿದ್ಯಾರ್ಥಿ ಜೀವನದ ಪ್ರಮುಖ ಆಸ್ತಿ. ವಿದ್ಯಾರ್ಥಿಗಳು ಎನ್‌ಎಸ್‌ಎಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಮುಖಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

2016-17ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಶಿಬಿರವನ್ನು ಯಶಸ್ವಿಯಾಗಿ ಸಂಘಟಿಸಲು ಸಹಾಯ ಮಾಡಿದ ಚಿಕ್ಕಕರಡೇವು ಗ್ರಾಮಸ್ಥರಾದ ತಿಮ್ಮೇಗೌಡ ಮತ್ತು ಹರೀಶ್ ಅವರನ್ನು ಈ ಸಂದರ್ಭದಲ್ಲಿ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

ಎನ್‌ಎಸ್‌ಎಸ್ ಅಧಿಕಾರಿ ಆನಂದ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಿಈಜಿ ಪ್ರಥಮದರ್ಜೆ ಸಂಜೆ ಕಾಲೇಜು ಪ್ರಾಂಶುಪಾಲರಾದ ಹೆಚ್.ಎ ರೇಖಾ, ಉಪನ್ಯಾಸಕರಾದ ಹೆಚ್.ಬಿ. ಅಜಿತ್‌ಪ್ರಸಾದ್, ರಾಮಚಂದ್ರ ಮತ್ತು ಸಿ.ಸಿ. ಸ್ವಾಮಿ ಹಾಗೂ ಸ್ನಾತಕೋತ್ತರ ಕೇಂದ್ರದ ಸಂಯೋಜಕ ಮನು ಹಿರಿಯಾಳ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು, ಎಸ್.ಎಲ್. ಭವಾನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಎಸ್. ಪೂಜಾ ಸ್ವಾಗತಿಸಿದರು ಮತ್ತು ಸಿ.ಜೆ. ಹಂಸ ವಂದಿಸಿದರು.

  • ಕೊಂಡಿನ್ಯೂಸ್.. ಹಾಸನ.
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: