Today: 14.Dec.2017

ಪ್ರತಿಭಟನೆ Featured

ಮಡಿವಾಳ ಜನಾಂಗವನ್ನ ಪ.ಜಾ.ಗೇ ಸೇರಿಸಲು ಒತ್ತಾಯ

09 Oct 2017 0 comment
(0 votes)
 

ಅರಕಲಗೂಡು: ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ದೊಡ್ಡಮ್ಮ ದೇವರಿಗೆ ಪೂಜೆಯನ್ನು ಸಲ್ಲಿಸಿ ದೇವಸ್ಥಾನದಿಂದ ತಾಲೂಕು ಕಛೇರಿ ವರೆಗೆ ಮೌನ ಮೆರವಣಿಗೆ ಹೊರಟು ತಾಹಸೀಲ್ದಾರ್ ಪ್ರಸನ್ನಮೂರ್ತಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಕಾಶೀಪುರ ಪುಟ್ಟಸ್ವಾಮಿ, ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ರಾಜ್ಯಾಧ್ಯಂತ ಹೋರಾಟ ಮಾಡುತ್ತಿದ್ದು ಸರ್ಕಾರ ಕೂಡಲೇ ಗಮನ ಹರಿಸಬೇಕೆಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಸಹಕಾರ್ಯದರ್ಶಿ ಶಿವಕುಮಾರ್, ಗೌರವ ಅಧ್ಯಕ್ಷರು ನಾಗಣ್ಣ ಮಡಿವಾಳ ಜನಾಂಗದ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮನವಿ ಸಲ್ಲಿಸುವ ಮುನ್ನ ಅಂಬೇಡ್ಕರ್ ಪುತ್ತಳಿಗೆ ಮಡಿವಾಳ ಸಂಘದ ವತಿಯಿಂದ ಹಾರ ಹಾಕಲಾಯಿತು.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: