Today: 22.Oct.2017

ಮೂಡನಂಬಿಕೆ Featured

ದೃಶ್ಯ ಮಾಧ್ಯಮಗಳಿಂದ ಮೂಢನಂಬಿಕೆ ಪೋಷಣೆ : ಎ.ಮಂಜು ವಿಷಾಧ

10 Oct 2017 0 comment
(0 votes)
 

ಅರಕಲಗೂಡು: ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕಾದ ಟಿವಿ ವಾಹಿನಿಗಳು ಮೂಢನಂಬಿಕೆ ಪೋಷಣೆ ಮಾಡುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಎ.ಮಂಜು ಅಭಿಪ್ರಾಯಪಟ್ಟರು. 

ಪಟ್ಟಣದ ಶಿಕ್ಷಕರ ಭವನದಲ್ಲಿ ಮಂಗಳವಾರ ದಲಿತ ಸಂಘಟನೆಗಳ ಒಕ್ಕೂಟ ಏರ್ಪಡಿಸಿದ್ದ ಮೂಢನಂಬಿಕೆಗಳು ಮತ್ತು ಶೋಷಣೆ ಕುರಿತ ಚಿಂತನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ದಲಿತ ವರ್ಗಗಗಳಲ್ಲಿ ಮಾತ್ರ ಮೂಢನಂಬಿಕೆ ಇದೆ ಎಂಬುದು ತಪ್ಪು. ಇದು ಎಲ್ಲ ವರ್ಗಗಳಲ್ಲೂ ಇದೆ. ಇದರಿಂದ ಹೊರಬಂದು ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಳ್ಳುವುದು ಆಗತ್ಯ ಎಂದರು. 

ರಾಜ್ಯ ಸರ್ಕಾರದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಮಾತ್ರ ಸವಲತ್ತುಗಳನ್ನು ನೀಡುತ್ತಿಲ್ಲ. ಸಮಾಜದಎಲ್ಲ ವರ್ಗಗಳಿಗೆ ಯೋಜನೆಯ ಲಾಭದೊರಕುತ್ತಿದೆ. ಈ ಕುರಿತು ಬರುತ್ತಿರುವ ಆರೋಪಗಳು ಸರಿಯಲ್ಲ. ಯಡಿಯೂರಪ್ಪ ದಲಿತರ ಮೇಲಿನ ಪ್ರೀತಿಯಿಂದ ಅವರ ಮನೆಯಲ್ಲಿ ಊಟ ಮಾಡುತ್ತಿಲ್ಲ. ಕೇವಲ ಚುನಾವಣೆಗಾಗಿ ಈ ರೀತಿಯ ನಾಟಕಗಳನ್ನು ನಡೆಸಲಾಗುತ್ತಿದೆ ಇಂತಹ ವಿಷಯಗಳ ಕುರಿತು ದಲಿತ ಸಮುದಾಯ ಎಚ್ಚರದಿಂದ ಇರಬೇಕು ಎಂದು ಹೇಳಿದರು. 

ಮೈಸೂರಿನ ಉರಿಲಿಂಗ ಪೆದ್ದಿಮಠದ ಬಹುಜನ ಜ್ಞಾನಪ್ರಕಾಶ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಾಸನ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಚ್.ಆರ್. ಕೃಷ್ಣಕುಮಾರ್ ಹಾಗೂ ಕುಬ್ಜ ಕ್ರೀಡಾಪಟು ಶಾಂತಕುಮಾರ್ ಅವರನ್ನು ಗೌರವಿಸಲಾಯಿತು. ಜಾನಪದಗೀತೆ ಗಾಯಕ ಅಮ್ಮರಾಮಚಂದ್ರ ಅವರಿಂದ ಗೀತಗಾಯನ ನಡೆಯಿತು. 

ಜಿಪಂ ಸದಸ್ಯರಾದ ಎಸ್.ಪಿ. ರೇವಣ್ಣ, ಬಿ.ಎಂ. ರವಿ, ತಾಪಂಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ವೀರಾಜ್, ಮೀನಾಕ್ಷಿ, ಧನಲಕ್ಷ್ಮಿ, ಪಪಂ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಸಾಕಮ್ಮ, ಸದಸ್ಯರಾದ ನಂದಕುಮಾರ್, ಶಶಿಕುಮಾರ್, ಗೌರಮ್ಮ, ದಲಿತ ಸಂಘಟನೆಗಳ ಮುಖಂಡರಾದ ಗಣೇಶ್‌ವೇಲಾಪುರಿ, ಎಂ.ಸಿ.ರಾಜೆಂದ್ರ, ಅಬ್ದುಲ್ ಸಮದ್, ಹರೀಶ್, ಕಿರಣ್, ಚಲುವರಾಜ್, ಕಾಂತರಾಜ್ ಮುಂತಾದವರು ಉಪಸ್ಥಿತರಿದ್ದರು.

 

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  good hits