Today: 22.Oct.2017

ರಾಜಕೀಯ ಮಾಡಲಾರೆ Featured

ಅಭಿವೃದ್ಧಿಯಲ್ಲಿ ನಾನು ರಾಜಕೀಯ ಮಾಡಲಾರೆ : ಸಚಿವ ಎ.ಮಂಜು

11 Oct 2017 0 comment
(0 votes)
 

ಅರಕಲಗೂಡು : ಅಭಿವೃದ್ಧಿ ಕೆಲಸದಲ್ಲಿ ಯಾವುದೇ ರೀತಿಯ ರಾಜಕೀಯ ತಾರತಮ್ಯ ಮಾಡದೆ ನಿಷ್ಪಕ್ಷಪಾತವಾಗಿ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಜನಪರ ಕೆಲಸಗಳನ್ನು ಮಾಡುತ್ತಿದ್ದೇನೆ ಎಂದು ಪಶುಸಂಗೋಪನೆ, ರೇಷ್ಮೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ತಿಳಿಸಿದರು.

ಅರಕಲಗೂಡು ತಾಲೂಕು ಕೊಣನೂರು ಹೋಬಳಿಯ ಕಟ್ಟೇಪುರ ಮೂಲಕ ಹಾದುಹೋಗುವ ಮಲ್ಲಿರಾಜಪಟ್ಟಣ-ಕಟ್ಟೇಪುರದ 4.5 ಕಿಮೀ ವರೆಗೆ 2 ಕೋಟಿ ವೆಚ್ಚದಲ್ಲಿ ಹಾಗೂ ಕಟ್ಟೇಪುರ-ಮಾದಾಪುರ ವರೆಗಿನ 6 ಕಿಮೀ ವರೆಗೆ 2 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಕಟ್ಟೇಪುರ ಗ್ರಾಮದಲ್ಲಿ ಗುದ್ದಲೀಪೂಜೆ ನೆರವೇರಿಸಿ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಗ್ರಾಮೀಣ ಪ್ರದೇಶದ ವಿವಿಧ ಯೋಜನೆಗಳ ಅಭಿವೃದ್ದಿಗೆ ಸರ್ವಾಂಗೀಣವಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸ್ಥಳೀಯ ಜನಪ್ರತಿನಿಗಳು ಹಾಗೂ ಅಧಿಕಾರಿಗಳೂ ಸಹ ಶ್ರಮವಹಿಸಬೇಕು ಎಂದರು.

ಮಾಜಿ ಶಾಸಕ ಎ.ಟಿ. ರಾಮಸ್ವಾಮಿರವರು ಇಲ್ಲಿಯವರೆಗೂ ಸುಮ್ಮನೆ ಕೂತು ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಕಡೆಗಳಲ್ಲಿಯೂ ನಮ್ಮ ಸರಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಹೀಗಿದ್ದವರು ಅವರು ಶಾಸಕರಾಗಿದ್ದಾಗ ಅವರ ಪಕ್ಷದವರೇ ಲೋಕೋಪಯೋಗಿ ಇಲಾಖೆ ಮಂತ್ರಿಯಾಗಿದ್ದರೂ ಈ ಭಾಗದ ರಸ್ತೆಗಳನ್ನು ಏಕೆ ಅಭಿವೃದ್ಧಿ ಪಡಿಸಲಿಲ್ಲ ಎಂದು ಹರಿಹಾಯ್ದರು.

ಮೂರು ಬಾರಿ ಶಾಸಕರಾಗಿದ್ದಾಗಲೂ ಆಡಳಿತ ಪಕ್ಷದಲ್ಲೆ ಇದ್ದ ಮಾಜಿ ಶಾಸಕರ ಆಡಳಿತ ವೈಫಲ್ಯದಿಂದ ತಾಲೂಕು ಅಭಿವೃದ್ದಿ ಕಾಣದೆ ಹಿಂದುಳಿಯಲು ಕಾರಣವಾಗಿದೆ. ದೇವೇಗೌಡರ ಕುಟುಂಬದಲ್ಲಿ ಇಬ್ಬರು ಸಚಿವರು, ಇಬ್ಬರು ಮುಖ್ಯಮಂತ್ರಿ ಹಾಗೂ ಪ್ರಧಾನಿಯಂತಹ ಹುದ್ದೆಯಲ್ಲಿದ್ದು ಮಾಡಲಾಗದ ಅಭಿವೃದ್ದಿ ಕಾರ್ಯಗಳನ್ನು ತಾವು ಸಚಿವರಾದ ಎರಡೇ ವರ್ಷದಲ್ಲಿ ಸಾಧಿಸಿದ್ದೇನೆ. ನನ್ನ ಅಭಿವೃದ್ದಿ ಕಾರ್ಯ ನೋಡಲಾಗದೇ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಇಲ್ಲ ಸಲ್ಲದ ಆರೋಪ ಮಾಡಲು ಇವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುವುದಿಲ್ಲ : ಇತ್ತೀಚೆಗೆ ಕಟ್ಟೇಪುರ ಗ್ರಾಮದಲ್ಲಿ ಭಾಷಣ ಮಾಡುತ್ತಾ ಮಾದರಿ ಗ್ರಾಮಕ್ಕೆ ಕಡತಗಳಿಗೆ ಸಹಿ ಮಾಡದೇ, ಅಧಿಕಾರಿಗಳನ್ನು ಹೆದರಿಸುವ ಮೂಲಕ ಅಡ್ಡಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ ಆದರೆ ಯಾವುದೇ ಅಭಿವೃದ್ದಿ ಕಾರ್ಯಗಳಿಗೆ ನನ್ನ ಅಡ್ಡಿ ಇಲ್ಲ ಹಾಗೆಯೇ ಅವರು ಮಾಡಿದ ಕೆಲಸವನ್ನು ಮಾತ್ರ ಅವರು ಹೇಳಿಕೊಳ್ಳಬೇಕೇ ಹೊರತು ನನ್ನ ಅವಧಿಯಲ್ಲಿ ಮಾಡಿದ್ದನ್ನೂ ನಾನೇ ಮಾಡಿಸಿದ್ದು ಎಂದು ಹೇಳಿಕೊಳ್ಳುವುದನ್ನು ಬಿಡಲಿ, ಯಾರೇ ಅಭಿವೃದ್ದಿ ಕಾರ್ಯ ಮಾಡಿದರೂ ಅವರ ಮನೆಯಿಂದ ಹಣ ತಂದು ಮಾಡುವುದಿಲ್ಲ ಸರ್ಕಾರದ ಅನುದಾನ ಪಡೆದುಕೊಂಡು ಮಾಡುತ್ತಾರೆ ಹೀಗಾಗಿ ಗ್ರಾಮಗಳ ಅಭಿವೃದ್ದಿ ಮುಖ್ಯವೇ ಹೊರತು ರಾಜಕೀಯವಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

- ಕೊಂಡಿನ್ಯೂಸ್, ಅರಕಲಗೂಡು

Last modified on Wednesday, 11 October 2017 14:02
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  good hits