Today: 22.Oct.2017

ಗಾಂಧಿಜೀ ಕನಸು Featured

ಗಾಂಧಿಜೀಯವರ ಪರಿಕಲ್ಪನೆಯನ್ನ ಮನೆ ಮನೆಗೆ ತಲುಪಿಸಿ:ಎ.ಮಂಜು

11 Oct 2017 0 comment
(0 votes)
 

ಕೊಣನೂರು: ಮಹಾತ್ಮ ಗಾಂಧೀಜಿಯವರ ಗ್ರಾಮ ರಾಜ್ಯದ ಪರಿಕಲ್ಪನೆಯ ಕನಸಿನ ಕೂಸು ರಾಷ್ಟ್ರಿಯ ಸೇವಾ ಯೋಜನೆ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಮೂಲಕ ಶಿಬಿರ ನಡೆಸುವ ಗ್ರಾಮಗಳ ಪ್ರತೀ ಮನೆ ಮನೆಗೂ ಶಿಬಿರದ ವಿದ್ಯಾರ್ಥಿಗಳು ತೆರಳಿ ಗ್ರಾಮಸ್ಥರಲ್ಲಿ ಮನಮುಟ್ಟುವಂತೆ ಅರಿವನ್ನು ಮೂಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ತಿಳಿಸಿದರು.

ಕೊಣನೂರು ಬಿ.ಎಸ್.ಎಸ್.ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಕೊಣನೂರು ಹೋಬಳಿ ಹೊನಗಾನಹಳ್ಳಿ ಗ್ರಾಮದಲ್ಲಿ  ಆಯೋಜಿಸಿದ್ದ ವಾರ್ಷಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಈ ಸಮಾಜದಲ್ಲಿ ಬದಲಾವಣೆ ತರುವಂತಾಗಬೇಕು ಆಗಲೇ ವಿದ್ಯಾರ್ಥಿಗಳ ಜೀವನ ಸಾಕಾರಗೊಂಡಂತಾಗುವುದು. ವಿದ್ಯಾರ್ಥಿಗಳಲ್ಲಿ ಪ್ರಮುಖವಾಗಿ ಬೇಕಾಗಿರುವುದು ಸ್ವಚ್ಚತೆ, ಶಿಸ್ತು, ಸೇವಾ ಮನೋಭಾವ ಮತ್ತು ಸಮಯಪ್ರಜ್ಞೆ ಇವುಗಳನ್ನು ಅರಿತು ಈ ಗ್ರಾಮದಲ್ಲಿ ನೀವಿರುವ ಏಳು ದಿನಗಳಲ್ಲಿ ಈ ಗ್ರಾಮದ ಜನತೆಗೆ ಅರಿವು ಮೂಡಿಸಿ ಎಂದು ತಿಳಿ ಹೇಳಿದರು.

ಗ್ರಾಮಗಳ ಅನಕ್ಷರಸ್ಥರಲ್ಲಿ ಶೈಕ್ಷಣಿಕ ಅರಿವು ಮೂಡಿಸುವ ಕೆಲಸ ಹಾಗೂ ಶ್ರಮಾದಾನದ ಮೂಲಕ ಗ್ರಾಮದ ಜನತೆಗೆ ಅರಿವು ಮೂಡಿಸುವ ಕೆಲಸಗಳನ್ನು ಮಾಡಿ ಇಲ್ಲಿನ ಅನುಭವಗಳನ್ನು ನೀವು ಇಲ್ಲಿಗೇ ಮರೆಯದೇ ಇತರರಿಗೂ ತಿಳಿ ಹೇಳುವ ಮೂಲಕ ನಿಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಅತೀ ಎತ್ತರಕ್ಕೆ ಬೆಳೆಯುತ್ತೀರಿ. ಈ ಸಮಾಜದಲ್ಲಿ ವಿದ್ಯೆ ಮತ್ತು ಸೇವೆಗೆ ತುಂಬಾ ಬೆಲೆಯಿದ್ದು, ವಿದ್ಯಾರ್ಥಿಗಳು ಪಠ್ಯ ವಿಷಯಗಳ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳ ಮೂಲಕ ಸೇವಾ ಮನೋಭಾವನೆ ಮೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಉಪಾಧ್ಯಕ್ಷ ಕೆ.ಆರ್. ಸೂರ‍್ಯನಾರಾಯಣ್, ಕಬ್ಬಳಿಗೆರೆ ಬೈರೇಗೌಡ, ಪ್ರಭಾರಿ ಪ್ರಾಂಶುಪಾಲ ಬಿ.ಪಿ. ಬಸವರಾಜ್, ಗ್ರಾಮದ ಹಿರಿಯರಾದ ಎಚ್.ಕೆ. ಅಣ್ಣೇಗೌಡ, ಮುಂತಾದವರು ಮಾತನಾಡಿದರು.

ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರುಗಳಾದ ಕಟ್ಟೇಪುರ ಚಂದ್ರಣ್ಣ, ದೊಡ್ಡೇಗೌಡ, ಪುಟ್ಟರಾಜೇಗೌಡ, ತಾ.ಪಂ ಸದಸ್ಯೆ ಲತಾ ರಾಮೇಗೌಡ, ಗ್ರಾ.ಪಂ ಸದಸ್ಯ ಕಾರ್ಗಲ್ ಜಗದೀಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಘುನಂದನ್, ಮುಖಂಡರುಗಳಾದ ಚಿಕ್ಕವೀರರಾಜೇಅರಸ್, ಪಟೇಲ್ ಪುಟ್ಟಸ್ವಾಮಿಗೌಡ, ಎಚ್.ಎ. ಶ್ರೀನಿವಾಸ್, ಉಮೇಶ್, ಮೂರ್ತಾಚಾರ್, ಪಟೇಲ್ ಅಣ್ಣೇಗೌಡ, ತರಿಗಳಲೆ ಶಿವಣ್ಣ, ಶಿಬಿರಾಧಿಕಾರಿ ನಾಗರಾಜ್, ಕಾಲೇಜಿ ಉಪನ್ಯಾಸಕ ವೃಂದದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

-Kondi news, Konanur.

 

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  good hits