Today: 22.Jul.2018

ಸಾವಯವ ರೈತರ ಸಂತೆ Featured

ಸಾವಯವ ರೈತರ ಸಂತೆಯಲ್ಲಿ ರೈತರಿಂದ ಗ್ರಾಹಕರಿಗೆ ನೇರ ಮಾರಾಟ : ಜಯಪ್ರಕಾಶ್

06 Apr 2018 0 comment
(0 votes)
 

ಇದೇ ಭಾನುವಾರ ಅಂದರೆ ಏ08 ರಂದು ಬೆಳಿಗ್ಗೆ 8ರಿಂದ 11ರ ತನಕ ನಗರದ ಆರ್.ಸಿ.ರಸ್ತೆಯ ಎನ್ ಸಿ ಸಿ ಕಛೇರಿ ಮುಂಭಾಗ ಸಾವಯವ ರೈತರ ಸಂತೆಯನ್ನು ಆಯೋಜಿಸಲಾಗಿದೆ. ಸಾವಯವ ರೈತರ ಸಂತೆಯನ್ನು ಕಳೆದ ಡಿಸೆಂಬರ್ ತಿಂಗಳಿನಿಂದ ಆರಂಭಿಸಲಾಗಿದ್ದು, ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದೆ. ಸಂತೆಯಲ್ಲಿ ಸಾವಯವದಲ್ಲಿ ಬೆಳೆದ ತಾಜಾ ಸೊಪ್ಪುಗಳು, ಹಣ್ಣು-ತರಕಾರಿಗಳು, ಮಲೆನಾಡ ವಿಶೇಷ ತರಕಾರಿಗಳು, ಅಕ್ಕಿ, ರಾಗಿ, ಬೆಳೆ, ಸಿರಿಧಾನ್ಯಗಳು ಮತ್ತು ಹಸುವಿನ ಹಾಲು, ಬೆಣ್ಣೆ, ತುಪ್ಪ ಹಾಗೂ ಕುರುಕಲು ತಿಂಡಿಗಳು ರೈತರಿಂದ ಗ್ರಾಹಕರಿಗೆ ನೇರ ಮಾರಾಟಕೆ ಲಭ್ಯವಿದೆ ಎಂದು ಸಂತೆ ಸಂಘಟಕ ಜಯಪ್ರಸಾದ್ ಬಳ್ಳೇಕೆರೆ ಪತ್ರಿಕೆಗೆ ತಿಳಿಸಿದ್ದಾರೆ.

ಹಾಸನ ಮತ್ತು ಕೊಡಗು ಜಿಲ್ಲೆಗಳ ಸಾವಯವ ಕೃಷಿಕರ ಒಕ್ಕೂಟ, ಪರಿಶುದ್ದ ಆಹಾರ ಆರ್ಗ್ಯಾನಿಕ್ ಅಸೋಸಿಯೇಷನ್, ಸ್ವದೇಶಿ ಜಾಗರಣ ಮಂಚ್ ಹಾಗೂ ಅವನಿ ಆರ್ಗ್ಯಾನಿಕ್ ಸಹಯೋಗದಲ್ಲಿ ಸಾವಯವ ಸಂತೆಯನ್ನು ಆಯೋಜಿಸಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಗ್ರಾಹಕರಲ್ಲಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ: ಜಯಪ್ರಸಾದ್: 7022299700 ಮತ್ತು ಶಿವಪ್ಪ: 7022299704 ರವರನ್ನ ಸಂಪರ್ಕಿಸಬಹುದು.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: