Today: 26.Apr.2018

ಭಾರತ್ ಬಂದ್

ಎಪ್ರಿಲ್ 10ರಂದು ಮತ್ತೆ ಭಾರತ್ ಬಂದ್...?

09 Apr 2018 0 comment
(1 Vote)
 

ದೆಹಲಿ: ಅಟ್ರಾಸಿಟಿ ಕಾಯಿದೆ ವಿರುದ್ಧ ಸುಪ್ರಿಂ ಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ದೇಶಾದ್ಯಂತ ದಲಿತ ಸಂಘಟನೆಗಳು ಮಾಡಿದ್ದ ಪ್ರತಿಭಟನೆ ತಣ್ಣಗಾಗಿ ಕೆಲವೇ ದಿನ ಕಳೆದಿದ್ದು, ಹಲವಾರು ಸಾವಿನೋವು ಸಂಭವಿಸಿತ್ತು. ಆದರೆ ಇನ್ನೊಂದು ಭಾರತ್ ಬಂದ್ ನಡೆಯುವ ಸಾಧ್ಯತೆ ಇದ್ದು, ಜಾತಿ ಆಧಾರಿತ ಮೀಸಲಾತಿ ವಿರೋಧಿಸಿ ಕೆಲವೊಂದು ಸಂಘಟನೆಗಳು ಎಪ್ರಿಲ್ 10ರಂದು ಭಾರತ್ ಬಂದ್ ನಡೆಸಿ ದೇಶಾದ್ಯಂತ ಪ್ರತಿಭಟನೆ ನಡೆಸಲು ಸಜ್ಜಾಗಿವೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿದೆ.

ಮಧ್ಯಪ್ರದೇಶ ಡಿಜಿಪಿ ರಿಶಿ ಕುಮಾರ್ ಶುಕ್ಲಾ ಈ ಬಗ್ಗೆ ಮಾಹಿತಿ ನೀಡಿದ್ದು, ಪರಿಸ್ಥಿತಿ ಎದುರಿಸಲು ಪೊಲೀಸರು ಸರ್ವ ರೀತಿಯಲ್ಲೂ ಸನ್ನದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. ಎಲ್ಲಾ ನಾಗರೀಕರು ಶಾಂತಿ ಹಾಗೂ ಸಾಮರಸ್ಯ ಕಾಪಾಡಬೇಕು. ಯಾರೂ ಕೂಡ ಹಿಂಸಾತ್ಮಕ ಪ್ರವೃತ್ತಿಗೆ ಇಳಿಬಾರದು. ರಾಜ್ಯದ ಹಿತ ಕಾಯಲು ಎಲ್ಲರೂ ಪ್ರಯತ್ನಿಸಬೇಕು ಮನವಿ ಮಾಡಿದರು.

ಅಂಬೇಡ್ಕರ್‌ರವರನನು ನಂಬುವ ದಲಿತರು ಎಲ್ಲರೂ ಶಾಂತಿ ಪ್ರಿಯರಾಗಿದ್ದು, ಶಾಂತವಾಗಿ ಪ್ರತಿಭಟಿಸುತ್ತಾರೆ. ಆದರೆ ಕಾಂಗ್ರೆಸ್ ಹಾಗೂ ಬಿಎಸ್ಪಿ ಪಕ್ಷಗಳು ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದಿಸುತ್ತಿವೆ. ಜಾತಿ ಹಾಗೂ ಧರ್ಮಗಳ ಹೆಸರಿನಲ್ಲಿ ಧೃವೀಕರನ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: