ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರೀತಂ ಗೌಡ ಅವರು ಇಂದು ಹಾಸನದ ವಿವೇಕನಗರ ಹಾಗು ವಿದ್ಯಾನಗರ ಬಡಾವಣೆಗಳ ರಸ್ತೆ ಡಾಂಬರೀಕರಣ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಭಿವೃದ್ಧಿ ಎಂದರೆ ಕೇವಲ ರಸ್ತೆಗಳನ್ನು ಮಾಡುವುದು ಆಸ್ಪತ್ರೆಗಳಿಗಳನ್ನು ಮಾಡುವುದಲ್ಲ.
ಅಭಿವೃದ್ಧಿ ಎಂದರೆ ಜನರ ಮನೆ ಬಾಗಿಲಿಗೆ ಮೂಲಭೂತ ಸೌಕರ್ಯಗಳನ್ನು ತಲುಪಿಸುವುದು. ಈ ನಿಟ್ಟಿನಲ್ಲಿ ಯಡಿಯೂರಪ್ಪನವರ ನೇತೃತ್ವದ ಸರ್ಕಾರ, ಹಾಸನ ನಗರವನ್ನು ಧೂಳು ಮತ್ತು ಮಣ್ಣು ರಸ್ತೆ ಮುಕ್ತ ನಗರವನ್ನಾಗಿ ಮಾಡುವುದು ನಮ್ಮ ಉದ್ದೇಶ. ಇನ್ನೂ ಮೂರೂವರೆ ವರ್ಷದಲ್ಲಿ ನಮ್ಮ ಗುರಿಯನ್ನು ಸಾಧಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.
ಈ ಸಂಧರ್ಭದಲ್ಲಿ ತಾ.ಪ.ಸದಸ್ಯರಾದ ಪ್ರದೀಪ್ ಕುಮಾರ್ ಗ್ರಾ.ಪಂ.ಸದಸ್ಯರಾದ ತುಳಸೀಪ್ರಸಾದ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು .