ರಾಜ್ಯ ಸುದ್ದಿ

ಕೆ.ಹೊಸಕೋಟೆ ಟೂ ಪಾಳ್ಯಕಡೆಗೆ ಪಯಣ

ಹಾಸನ: ಮಲೆನಾಡು ಭಾಗದ  ಕಾಡಂಚಿನಿಂದ ಮತ್ತೆ ಕಾಡನೆಗಳು ಈಗ ಹಾಸನ ಮತ್ತು ಆಲೂರು ಭಾಗದ ಸಮೀಪ ಬರುತ್ತಿದ್ದು, ನಿತ್ಯ ಕಾಡಾನೆಗಳ ಹಾವಳಿಯಿಂದ ಮಲೆನಾಡು ಮತ್ತು ಅರೆಮಲೆನಾಡು ಭಾಗದ ರೈತರ ಕಂಗಲಾಗಿದ್ದಾರೆ.  ಇಂದು ಕೂಡಾ ಪಾಳ್ಯ ಸಮೀಪ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ರೈತನ ಜೀವನವನ್ನ ಹಿಂಡಲು ಶುರುಮಾಡಿವೆ.

ಇಂದು ಆಲೂರು ಭಾಗದ  ಪಾಳ್ಯ ಹೋಬಳಿಯ ಹರೇಹಳ್ಳದ ಕೊಪ್ಪಲು, ಚಿಗಳೂರು ಕಿಡ್ಲೂರು, ಹೊನ್ನವಳ್ಳಿಯ ಭಾಗದಲ್ಲಿ ಇಂದು 6 ಆನೆಗಳು ದಾಳಿ ನಡೆಸಿವೆ. ಮೂರು ದಿನಗಳಿಂದ ಜಿಲ್ಲೆಯಲ್ಲಿ ತುಂತುರು ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ದ್ವಿದಳ ಧಾನ್ಯದ ಬೆಳೆಗಳನ್ನ ಭಿತ್ತಲು ಶುರುಮಾಡಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿರುವಾಗಲೇ ಹಿಂಡು ಹಿಂಡಾಗಿ ಆನೆ ಕಾಣಿಸಿಕೊಂಡಿದ್ದರಿಂದ ಕೃಷಿ ಚಟುವಟಿಕೆಯನ್ನ ಸ್ಥಗಿತಗೊಳಿಸಿ ಎದ್ದನೋ ಬಿದ್ದನೋ ಎಂಬಂತೆ ಮನೆಯನ್ನ ಸೇರಿಕೊಳ್ಳುತ್ತಿದ್ದಾರೆ.

ಹೌದು ಮಲೆನಾಡ ಜನ್ರ ಬದುಕು ದಿನದಿಂದ ದಿನಕ್ಕೆ ಪ್ರಾಣಿಗಳ ಉಪಟಳದಿಂದ ಕುಸಿಯುತ್ತಿದೆ. ಬದುಕುವುದಕ್ಕೆ ಒಂದಿಷ್ಟು ಬೆಳೆ ಬೆಳೆದುಕೊಳ್ಳೋಣ ಎಂದ್ರೆ ಕಾಡು ಪ್ರಾಣಿಗಳು ತಿಂದು ಮುಗಿಸುವ ಜೊತೆಗೆ ಹಾಳು ಮಾಡುತ್ತಿವೆ. ಮಲೆನಾಡು ಭಾಗವಾದ ಸಕಲೇಶಪುರದಲ್ಲಿ ಆನೆಗಳ ಉಪಟಳ ಹೆಚ್ಚಾಗಿತ್ತು. ಪ್ರವಾಹ ಬಂದ ಬಳಿಕ ಆ ಭಾಗದಲ್ಲಿ ಕೊಂಚ ಕಾಡಾನೆಗಳು ಕಡಿಮೆಯಾಗಿದೆ. ದೊಡ್ಡ ಬೆಟ್ಟದ ಸಮೀಪ ಹರಿಯುತ್ತಿರುವ ಹೇಮಾವತಿ ನದಿಯನ್ನ ದಾಟಲು ಸಾಧ್ಯವಾಗದೇ ಕೆಲವು ಆನೆಗಳು ಕಾಡಿನ ಭಾಗದಲ್ಲಿ ಉಳಿದುಕೊಂಡಿದ್ದು, ಆಲೂರಿನಿ ಕೆಂಚಮ್ಮನ ಹೊಸಕೋಟೆ, ಕುಂದೂರು ಭಾಗದಲ್ಲಿ 20-30 ಆನೆಗಳು ನದಿಯನ್ನ ದಾಟಿ ಕಾಡಿನ ಕಡೆಗೆ ಹೋಗಲು ಸಾಧ್ಯವಾಗದೇ ಈ ಭಾಗದಲ್ಲಿಯೇ ಉಳಿದಿವೆ.

ಇನ್ನು ಈ ಕಾಡಾನೆಗಳು ಬಂದಿರುವ ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡಾಹಿಸಿದ್ದು, ಪಟಾಕಿ ಸಿಡಿಸಿ ದೊಡ್ಡಬೆಟ್ಟದ ತಪ್ಪಲಿನ ಭಾಗಕ್ಕೆ ಓಡಿಸುವ ಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಪ್ರತಿನಿತ್ಯ ಪಟಾಕಿ ಸಿಡಿಸಿ ಓಡಿಸಲು ಸಾಧ್ಯವಾಗದು. ಆದ್ರೆ ಇದಕ್ಕೊಂದು ಶಾಶ್ವತ ಪರಿಹಾರವನ್ನ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರಗಳು ಚಿಂತನೆ ನಡೆಸಬೇಕಿದೆ. ಕಾರಣ ರೈತರ ಹೊಲ ಗದ್ದೆಗಳ ಮೇಲೆ ದಾಳಿ ನಡೆಸಿ ಬೆಳೆಯನ್ನ ತಿಂದ ಬಳಿಕವೂ ಬೆಳೆಯ ಮಧ್ಯೆ ಹಿಂಡು ಹಿಂಡಾಗಿ ಓಡಾಡುವುದರಿಂದ ಈಗಾಗಲೇ ಈ ಭಾಗದಲ್ಲಿ ಊಹೆಗೂ ಮೀರದಷ್ಟು ಹಾನಿಯಾಗಿದ್ದು, ಪರಿಹಾರ ಕೂಡಾ ಮರಿಚಿಕೆಯಾಗಿದೆ.  

ಇನ್ನು ಪಾಳ್ಯಕ್ಕೆ ಆಗಮಿಸಿದ ಶಾಸಕ ಹೆಚ್.ಕೆ.ಕುಮಾರಸ್ವಾಮಿ,  ಮಾಧ್ಯಮದವರೊಂದಿಗೆ ಮಾತನಾಡಿ, ಆನೆಗಳ ಹಾವಳಿ ಮಿತಿಮೀರಿದ್ದು, ಆಲೂರು-ಸಕಲೇಶಪುರ ಭಾಗದಲ್ಲಿ ಜೋಳ, ಕಾಫಿ, ಮೆಣಸು ಹಾಳು ಮಾಡುತ್ತಿದ್ದು, ನಾನು ಸಾಕಷ್ಟು ಬಾರಿ ಹೋರಾಟ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಷ್ಟೆಯಲ್ಲದೇ  ಹೆಚ್ಚಿನ ಸಿಬ್ಬಂದಿಯನ್ನ ಕರೆಸಿ ಈ ಬಾಗದಲ್ಲಿ ಉಪ ವಿಭಾಗವನ್ನ ತೆರೆದು ಜನರಿಗೆ ಮಾಹಿತಿ ನೀಡುಲು ಮುಂದಾಗಬೇಕು. ಅಲ್ಲದೇ ಜನ್ರ ಬೆಳೆಗಳಿಗೆ ಆಗಿರುವ ಸುಮಾರು 1ಕೋಟಿಗೂ ಹೆಚ್ಚು ನಷ್ಟವನ್ನ ಆದಷ್ಟು ಬೇಗ ಬಿಡುಗಡೆ ಮಾಡಬೇಕು. ಮಗ್ಗೆ ಭಾಗದಲ್ಲಿ ಒಂದು ಉಪವಿಭಾಗವನ್ನ ತೆರೆದು ಜನರ ಸಂಕಷ್ಟಕ್ಕೆ ಸ್ಪಂದಿಸುವಂತಹ ಕಾರ್ಯವಾಗಬೇಕೆಂದು ಸರ್ಕಾರಕ್ಕೆ ಒತ್ತಡ ಹಾಕಿದ್ರು.

Kondi News, Alur.

 

Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Sep 23, 2019
ಹಾಸನ/ಸಕಲೇಶಪುರ: ಹೆತ್ತಪ್ಪನೇ ತನ್ನ ಮಗಳ ಮೇಲೆ ಕಳೆದ ಮೂರು ...
Has no content to show!

Visitors Counter

00565083
Today
This Month
Last Month
All days
90
3191
7301
565083
Your IP: 18.234.247.75
2021-01-16 04:23

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…