ದೇಶ-ವಿದೇಶ

ನವದೆಹಲಿ: ತಮಗೆ ಪ್ರಾಣ ಬೆದರಿಕೆ ಇದೆ. ಸೂಕ್ತ ರಕ್ಷಣೆ ಒದಗಿಸುವಂತೆ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಅವರನ್ನು ಆಗ್ರಹಿಸಿ ವಕೀಲರೊಬ್ಬರು ಬೆತ್ತಲೆ ಪ್ರತಿಭಟನೆ ಮಾಡಿದ ಪ್ರಸಂಗ ನವದೆಹಲಿಯಲ್ಲಿ ನಡೆದಿದೆ.  ಸುಪ್ರೀಂಕೋರ್ಟ್​ನ ಭದ್ರತಾ ಸಿಬ್ಬಂದಿ ಬಟ್ಟೆ ಹಾಕಿಕೊಳ್ಳುವಂತೆ ಅವರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗದಿದ್ದಾಗ ಅವರನ್ನು ವಶಕ್ಕೆ ಪಡೆದು ಕರೆದುಕೊಂಡು ಹೋದರು.

ಮಧುರೈ ಜಿಲ್ಲಾ ನ್ಯಾಯಾಲಯದ ವಕೀಲ ಸಿ.ಎಂ. ಸ್ವಾಮಿ ಬೆತ್ತಲೆ ಪ್ರತಿಭಟನೆ ನಡೆಸಿದವರು. ತಾವೊಬ್ಬ ಸಾಮಾಜಿಕ ಕಾರ್ಯಕರ್ತ. ವೃತ್ತಿಯಿಂದ ವಕೀಲ. ನನಗೆ ಕೆಲವು ರೌಡಿಗಳಿಂದ ಪ್ರಾಣ ಬೆದರಿಕೆ ಇದೆ. ಸೂಕ್ತ ರಕ್ಷಣೆ ಒದಗಿಸುವಂತೆ ಕೋರಿ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ಅವರಿಗೆ ಸಿ.ಎಂ. ಸ್ವಾಮಿ ಮನವಿ ಮಾಡಿಕೊಂಡಿದ್ದರು. ಆದರೆ ಸಿಜೆಐ ಅವರ ಮನವಿ ಪುರಸ್ಕರಿಸಲಿಲ್ಲ ಎನ್ನಲಾಗಿದೆ.

ಇದರಿಂದ ಸಿಟ್ಟಿಗೆದ್ದ ಸಿ.ಎಂ. ಸ್ವಾಮಿ, ಸುಪ್ರೀಂಕೋರ್ಟ್​ನ ಆವರಣದಲ್ಲಿರುವ ಮರದ ಬಳಿ ಬಟ್ಟೆಗಳೆಲ್ಲವನ್ನೂ ಕಳಚಿ ಮನವಿ ಪತ್ರವನ್ನು ಹಿಡಿದುಕೊಂಡು, ಸಿಜೆಐ, ದಯವಿಟ್ಟು ನನ್ನ ಮನವಿ ಆಲಿಸಿ ಎಂದು ಕೂಗುತ್ತಾ ಪ್ರತಿಭಟನೆ ಆರಂಭಿಸಿದರು. ಅಂದಾಜು 5 ನಿಮಿಷ ಕಾಲ ಪ್ರತಿಭಟನೆ ನಡೆದ ಬಳಿಕ ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿ, ಬಟ್ಟೆ ಧರಿಸಿಕೊಳ್ಳುವಂತೆ ಸಿ.ಎಂ. ಸ್ವಾಮಿ ಮನವೊಲಿಸಲು ಪ್ರಯತ್ನಿಸಿದರು. ಆದರೆ ಕೇಳದಿದ್ದಾಗ ಅವರನ್ನು ವಶಕ್ಕೆ ಪಡೆದು, ಕರೆದೊಯ್ದರು.

ಬ್ಯೂರೋ ವರದಿ, ಕೊಂಡಿನ್ಯೂಸ್.

ಕಳೆದ 9 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಚ್ ಹೆಸರಿನ ನಾಯಿ ಮೃತಪಟ್ಟಿದೆ.
ಈ ನಾಯಿ ಭಾರತೀಯ ಸೇನೆಯಲ್ಲಿ IED ಬಾಂಬ್ ಗಳನ್ನು ಪತ್ತೆಹಚ್ಚುವಲ್ಲಿ ವಿಶೇಷವಾದ ಪರಿಣಿತಿಯನ್ನು ಹೊಂದಿತ್ತು.
ಡ್ಚ್ ನಾಯಿಯ ನಿಧನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಸೇನೆಯ ಹಿರಿಯ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಸೇನೆಯಲ್ಲಿ ಕರ್ನಾಟಕ ರಾಜ್ಯದ ಮುಧೋಳ ನಾಯಿಗಳು ಸೇವೆ ಸಲ್ಲಿಸುತ್ತಿದ್ದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಮುಧೋಳ ನಾಯಿಗಳ ತಳಿ ಸಂವರ್ಧನ ಕೇಂದ್ರವನ್ನು ತೆರೆಯಲಾಗಿದ್ದು ವಿಶೇಷವಾಗಿ ಸೈನ್ಯಕ್ಕೆ ನಾಯಿಗಳನ್ನು ಇಲ್ಲಿಂದ ಸರಬರಾಜು ಮಾಡಲಾಗುತ್ತದೆ. ಬೇಟೆ ಮಾಡಲಿಕ್ಕೆಂದೇ ವಿಶೇಷವಾಗಿ ಬಳಸುವ ಮುಧೋಳ ನಾಯಿಗಳನ್ನು ಭಾರತೀಯ ಸೇನೆ ವಿಶೇಷವಾದ ಪರಿಣತಿಯನ್ನು ಕೊಟ್ಟು ಸೈನ್ಯದಲ್ಲಿ ತೊಡಗಿಸಿಕೊಂಡಿದೆ. ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಮುಧೋಳ ನಾಯಿಗಳು ನಿಜವಾಗಿಯೂ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿವೆ.

ವಿಕ್ರಂ ಲ್ಯಾಂಡರ್ ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಇಸ್ರೋ.
ಭಾರತದ ಐತಿಹಾಸಿಕ ಚಂದ್ರಯಾನ-೨ರ ಅಂತಿಮ ಘಟ್ಟದಲ್ಲಿ ವಿಕ್ರಂ ಲ್ಯಾಂಡರ್ ಸಂಪರ್ಕ ಸಾಧಿಸುವಲ್ಲಿ ಇಸ್ರೋ ಹಿನ್ನಡೆ ಅನುಭವಿಸಿತ್ತು. ಆದರೆ ಶತಾಯುಗತಾಯ ವಿಕ್ರಂ ಲ್ಯಾಂಡರ್ ನ್ನು ಸಂಪರ್ಕಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಇಸ್ರೋ ವಿಜ್ಞಾನಿಗಳು ತಮ್ಮ ಅವಿರತ ಪ್ರಯತ್ನ ಮುಂದುವರಿಸಿದ್ದಾರೆ.
ಚಂದಿರನಲ್ಲಿ ಯಶಸ್ವಿಯಾಗಿರುವ ವಿಕ್ರಮ ಲ್ಯಾಂಡರ್ ಕೆಲವು ಫೋಟೋಗಳನ್ನು ಇಸ್ರೋಗೆ ರವಾನಿಸಿದೆ.
ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿರುವ ಚಿತ್ರಗಳನ್ನು ಆರ್ಬಿಟರಿ ಸೆರೆಹಿಡಿದಿದೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ.

ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರೀತಂ ಗೌಡ ಅವರು ಇಂದು ಹಾಸನದ ವಿವೇಕನಗರ ಹಾಗು ವಿದ್ಯಾನಗರ ಬಡಾವಣೆಗಳ ರಸ್ತೆ ಡಾಂಬರೀಕರಣ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಭಿವೃದ್ಧಿ ಎಂದರೆ ಕೇವಲ ರಸ್ತೆಗಳನ್ನು ಮಾಡುವುದು ಆಸ್ಪತ್ರೆಗಳಿಗಳನ್ನು ಮಾಡುವುದಲ್ಲ. 

ಅಭಿವೃದ್ಧಿ ಎಂದರೆ ಜನರ ಮನೆ ಬಾಗಿಲಿಗೆ ಮೂಲಭೂತ ಸೌಕರ್ಯಗಳನ್ನು ತಲುಪಿಸುವುದು. ಈ ನಿಟ್ಟಿನಲ್ಲಿ ಯಡಿಯೂರಪ್ಪನವರ ನೇತೃತ್ವದ ಸರ್ಕಾರ, ಹಾಸನ ನಗರವನ್ನು ಧೂಳು ಮತ್ತು ಮಣ್ಣು ರಸ್ತೆ ಮುಕ್ತ ನಗರವನ್ನಾಗಿ ಮಾಡುವುದು ನಮ್ಮ ಉದ್ದೇಶ. ಇನ್ನೂ ಮೂರೂವರೆ ವರ್ಷದಲ್ಲಿ ನಮ್ಮ ಗುರಿಯನ್ನು ಸಾಧಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.
ಈ ಸಂಧರ್ಭದಲ್ಲಿ ತಾ.ಪ.ಸದಸ್ಯರಾದ ಪ್ರದೀಪ್ ಕುಮಾರ್ ‍ಗ್ರಾ.ಪಂ.ಸದಸ್ಯರಾದ ತುಳಸೀಪ್ರಸಾದ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು .

ಈ ಬಗ್ಗೆ ಆರ್ಥಿಕ ತಜ್ಞರೆಂದೆ ಪ್ರಖ್ಯಾತಿಯಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರದ ಮೋದಿ ಸರ್ಕಾರ ಜಾರಿ ಮಾಡಿದ ಜಿಎಸ್ ಟಿ ಮತ್ತು ನೋಟ್ ಬ್ಯಾನ್ ಪದ್ಧತಿಯಿಂದ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಇದೊಂದು ಮಾನವ ನಿರ್ಮಿತ ಬಿಕ್ಕಟ್ಟಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ದೇಶದ ಜಿಡಿಪಿ ಶೇಕಡಾ 5 ಕ್ಕೆ ಕುಸಿದಿದೆ. ದೇಶದ ಆರ್ಥಿಕ ಸ್ಥಿತಿ ಇಷ್ಟೊಂದು ದುಸ್ಥಿತಿಗೆ ಬರಲು ಕೇಂದ್ರ ಸರ್ಕಾರ ತೆಗೆದುಕೊಂಡ ಅವೈಜ್ಞಾನಿಕ ನಿರ್ಧಾರಗಳೇ ಕಾರಣ ಎಂದು ಟೀಕಿಸಿದ್ದಾರೆ.
2004- 2005 ಆರ್ಥಿಕ ಸ್ಥಿತಿಯನ್ನು ಅವಲೋಕಿಸಿ ಹೇಳುವುದಾದರೆ ಪ್ರಸ್ತುತ ಜಿಡಿಪಿ ಮೂರಕ್ಕೆ ಕುಸಿಯಬಹುದು ಎಂದು ಕೂಡ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಮೋದಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಮನಮೋಹನ್ ಸಿಂಗ್ ರಿಸರ್ವ್ ಬ್ಯಾಂಕ್ ತನ್ನಲ್ಲಿದ್ದ 1.76 ಲಕ್ಷ ಕೋಟಿ ನಿಧಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ ಆದರೆ ಮೋದಿ ಸರ್ಕಾರ ಈ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದೆ ಕಾಶ್ಮೀರದ ಬಗ್ಗೆ ಮಾತನಾಡುವುದಿದ್ದರೆ ಅದು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಮೂಲಕ ಪಾಕಿಸ್ತಾನಕ್ಕೆ ಕಾಶ್ಮೀರದ ವಿಷಯವಾಗಿ ಭಾರತ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಕಾಶ್ಮೀರ ವಿಷಯಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನ ಬೇರೆ ರಾಷ್ಟ್ರಗಳ ಮಧ್ಯಸ್ಥಿಕೆಯ ಬಗ್ಗೆ ಮಾತನಾಡುತ್ತಿದ್ದು ಮತ್ತು ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕೆಂಬ ಪಾಕಿಸ್ತಾನದ ಧೋರಣೆಯನ್ನು ರಾಜನಾಥ್ ಸಿಂಗ್ ತೀವ್ರವಾಗಿ ಖಂಡಿಸಿದ್ದಾರೆ . ಈ ಬಗ್ಗೆ ಹರಿಯಾಣದ ಪಂಚಕುಲದಲ್ಲಿ ಜನಾಶೀರ್ವಾದ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ರಾಜನಾಥ್ ಸಿಂಗ್ ನಮ್ಮ ಮತ್ತು ಪಾಕಿಸ್ತಾನದೊಂದಿಗಿನ ಮಾತುಕತೆ ಏನಿದ್ದರೂ ಇನ್ನು ಮುಂದೆ ಪಾಕ್ ಆಕ್ರಮಿತ ಕಾಶ್ಮೀರದ ವಿಷಯವಾಗಿ ಅಷ್ಟೇ .ಅದು ಪಾಕಿಸ್ತಾನ ಭಯೋತ್ಪಾದನೆಗೆ ಪ್ರಚೋದನೆ ನೀಡುವ ಕೆಲಸವನ್ನು ನಿಲ್ಲಿಸಿದರೆ ಮಾತ್ರ ,ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತನಾಡಬಹುದು ಎಂದು ಹೇಳಿದ್ದಾರೆ‌.
ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ 370ನೇ ವಿಧಿ ರದ್ದು ಮಾಡಿದ ನಂತರ ಪಾಕಿಸ್ತಾನ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ಗಾಗಿ ಹಲವು ರಾಷ್ಟ್ರಗಳ ಬೆಂಬಲ ಕೋರುತ್ತಿದೆ .ಈ ವಿಷಯದಲ್ಲಿ ಚೀನಾ ಹೊರತಾಗಿ ಉಳಿದೆಲ್ಲ ರಾಷ್ಟ್ರಗಳು ಭಾರತದ ಪರ ನಿಂತಿವೆ .ಜಮ್ಮು ಮತ್ತು ಕಾಶ್ಮೀರ ವಿಷಯ ದ್ವಿಪಕ್ಷೀಯ ವಿಷಯವಾಗಿದ್ದು ಈ ವಿಚಾರದಲ್ಲಿ ನಾವು ಮೂಗುತೂರಿಸುವುದು ಬೇಡ ಎಂದು ಉಳಿದ ರಾಷ್ಟ್ರಗಳು ಹೇಳುವ ಮೂಲಕ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಪೈಕಿ 14 ರಾಷ್ಟ್ರಗಳು ಭಾರತದ ಪರ ನಿಂತಿದ್ದರೆ,ಚೀನಾ ಮಾತ್ರ ಮಿತ್ರ ದೇಶ ಪಾಕಿಸ್ತಾನಕ್ಕೆ ಸಹಾಯ ಮಾಡಲು ಹೋಗಿ ಮುಖಭಂಗ ಅನುಭವಿಸುವಂತಾಗಿದೆ.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Sep 23, 2019
ಹಾಸನ/ಸಕಲೇಶಪುರ: ಹೆತ್ತಪ್ಪನೇ ತನ್ನ ಮಗಳ ಮೇಲೆ ಕಳೆದ ಮೂರು ...
Has no content to show!

Visitors Counter

00565083
Today
This Month
Last Month
All days
90
3191
7301
565083
Your IP: 18.234.247.75
2021-01-16 04:23

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…