ಸ್ಥಳೀಯ ಸುದ್ದಿ

ವೃದ್ಧೆಯ ಮೇಲೆ ಚಿರತೆ ದಾಳಿ ತಲೆಗೆ 28 ಹೊಲಿಗೆ


ಹಾಸನ : ವೃದ್ದೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದ್ದು, ತಲೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರವಾದ ಗಾಯಗಳಾಗಿದ್ದು, ಹಾಸನದ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಸನ ತಾಲೂಕಿನ ಚಿಗಳ್ಳಿ ಗ್ರಾಮದವರಾದ ರಂಗಮ್ಮ(70) ಬೆಳಿಗ್ಗೆ 4ಗಂಟೆ ಸಮಯದಲ್ಲಿ ಬಹಿರ್ದೆಸೆಗೆಂದು ಮನೆಯಿಂದ ಹೊರಗೆ ಬಂದಾಗ, ಅಲ್ಲೇ ಇದ್ದ ಚಿರತೆಯೊಂದು ವೃದ್ಧೆಯ ಮೇಲೆ ದಾಳಿ ನಡೆಸಿದೆ. ವೃದ್ದೆಯ ಕಿರುಚಾಟ ವನ್ನು ಕೇಳಿ ಮನೆಯಲ್ಲಿದ್ದ ಅವರ ಮಗ ಮತ್ತು ಮೊಮ್ಮಗಳು ಹೊರಗೆ ಬಂದು ನೋಡಿದಾಗ ಚಿರತೆ ದಾಳಿ ಮಾಡುತ್ತಿರುವುದು ಕಂಡುಬಂದಿದೆ. ತಕ್ಷಣವೇ ಅವರ ಮಗ ಚಿರತೆಯ ಕಣ್ಣಿನ ಮೇಲೆ ಬಟ್ಟೆ ಹಾಕಿ ಚಿರತೆಯನ್ನು ಓಡಿಸಿರುವುದಾಗಿ ತಿಳಿದು ಬಂದಿದೆ.
ರಂಗಮ್ಮನವರ ತಲೆಗೆ ತೀವ್ರತರವಾದ ಗಾಯಗಳಾಗಿದ್ದು ತಕ್ಷಣವೇ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದ್ದು ತಲೆಗೆ 28 ಹೊಲಿಗೆಗಳನ್ನು ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿರತೆ ದಾಳಿಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಗ್ರಾಮದಲ್ಲಿ ಚಿರತೆ ದಾಳಿ ಇದೇ ಮೊದಲೇನಲ್ಲ ಈ ಹಿಂದೆ ಮಗುವಿನ ಅರ್ಧಭಾಗವನ್ನು ತಿಂದು ಹೋಗಿದ್ದ ಚಿರತೆ,ನಾಲ್ಕೈದು ಗ್ರಾಮದ ಜನರಿಗೆ ಕಚ್ಚಿ ಗಾಯಗೊಳಿಸಿರುವ ಘಟನೆಗಳು ಕೂಡ ಈ ಹಿಂದೆ ನಡೆದಿದೆ.
ತಕ್ಷಣವೇ ಅರಣ್ಯ ಸಿಬ್ಬಂದಿ ಎಚ್ಚೆತ್ತು ಚಿರತೆಯನ್ನು ಹಿಡಿದು ಗ್ರಾಮದ ಜನರಲ್ಲಿ ಮನೆ ಮಾಡಿರುವ ಆತಂಕವನ್ನು ದೂರ ಮಾಡಬೇಕಿದೆ.

Last modified on Sunday, 18 August 2019 10:40
Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Sep 08, 2019
ಹಾಸನ: ತವರಿಗೆ ಹೋಗುವುದಾಗಿ ಅಮ್ಮ ಮಗ ಕಾಲುವೆಗೆ ಹಾರಿ ...
Has no content to show!

Visitors Counter

00554647
Today
This Month
Last Month
All days
56
56
5443
554647
Your IP: 66.249.66.146
2020-12-01 07:03

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…