ಸ್ಥಳೀಯ ಸುದ್ದಿ

ಮುದ್ರಣಕಾರರು ಸಂಘಟಿತರಾಗಿ : ದೇವರಾಜು

ಹಾಸನ : ನಗರದ ದೊಡ್ಡಗರಡಿ ವೃತ್ತದ ಕಂಬದನರಸಿಂಹಸ್ವಾಮಿ ದೇವಾಲಯದ ಎದುರು ಹಾಸನ ಜಿಲ್ಲಾ ಮುದ್ರಣಕಾರರ ಸಂಘದ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಶ್ರೀಮತಿ ಚಂದ್ರಕಲಾ ಅವರ ಪತಿ ನಾಗೇಶ್‌ ಅವರು ನೂತನ ಧ್ವಜಸ್ಥಂಬವನ್ನು ಉದ್ಘಾಟಿಸಿ ನಂತರ ಧ್ವಜಾರೋಹಣ ನೆರವೇರಿಸಿದರು.

ಮಾಜಿ ನಗರ ಸಭಾ ಸದಸ್ಯ ಹೆಚ್. ಹೆಚ್. ದೇವರಾಜು ಅವರು ಈ ಸಂದರ್ಭದಲ್ಲಿ ಮಾತನಾಡಿ ಈ ಹಿಂದೆ ಮುದ್ರಣಕಾರರು ಸಂಘಟಿತರಾಗಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಹಾಸನ ಜಿಲ್ಲಾ ಮುದ್ರಣಕಾರರ ಸಂಘ ಹೆಚ್ಚು ಕ್ರಿಯಾಶೀಲವಾಗಿ ಸಂಘಟಿವಾತವಾಗುತ್ತಿದೆ. ಸಂಘದ ವತಿಯಿಂದ ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣೆಗೆ ಒತ್ತು ನೀಡುತ್ತಿರುವುದು ಸಂಘದ ಮತ್ತು ದೇಶ ಭಕ್ತಿಯನ್ನು ಹೊಂದಿರುವುದಕ್ಕೆ ಸಾಕ್ಷಿಯಾಗಿದೆ. ಪ್ರತೀ ವರ್ಷ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದ್ರು. 

ಮಾಜಿ ಅಧ್ಯಕ್ಷ ಗೋಪಾಲಕೃಷ್ಣಶೆಟ್ಟಿ ಮಾತನಾಡಿ ಸಂಘದ ಇಂದಿನ ಪಧಾಧಿಕಾರಿಗಳು ಸಂಘದ ನಿರ್ಣಯಗಳನ್ನು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದೀರಿ ಮುಂದೇಯೂ ಸಂಘವನ್ನು ಸಧೃಢಗೊಳಿಸುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ನಾಗೇಶ್, ಜಿಲ್ಲಾ ಮುದ್ರಣಕಾರರ ಸಂಘದಅಧ್ಯಕ್ಷರಾದ ಎಂ.ಆರ್.ಮಂಜೇಗೌಡ, ಮಾಜಿ ನಗರಸಭಾ ಸದಸ್ಯ ಹೆಚ್. ಹೆಚ್. ದೇವರಾಜು, ಗೌರವಾಧ್ಯಕ್ಷರಾದ ಹೆಚ್.ಎಸ್. ಹೇಮಂತ್‌ಕುಮಾರ್, ಗೋಪಾಲಕೃಷಶೆಟ್ಟಿ, ಇವರುಗಳನ್ನು ಸನ್ಮಾನಿಸಲಾಯಿತು. 

ಸಂಘದ ಜಿಲ್ಲಾದ್ಯಕ್ಷ ಮಂಜೇಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಗೌರವಾಧ್ಯಕ್ಷ ಹೆಚ್.ಎಸ್. ಹೇಮಂತ್‌ಕುಮಾರ್, ಉಪಾಧ್ಯಕ್ಷ ಕೆ. ಎ. ಕಲ್ಯಾಣಿಗೌಡ, ಸಹಕಾರ್ಯದರ್ಶಿ ಇ. ಎಸ್. ಮಧುಕುಮಾರ್, ಖಜಾಂಚಿಜಯಂತ್, ಪಧಾಧಿಕಾರಿಗಳಾದ ಸತ್ಯನಾರಾಯಣ, ತುಳಸಿಪ್ರಸಾದ್, ಮಲ್ಲಿಕಾರ್ಜುನ, ರಾಮಚಂದ್ರ, ಹೆಚ್. ಎ. ರಿಜ್ವಾನ್‌ಅಹಮದ್ ಮತ್ತಿತರರು ಭಾಗವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್‌ಗೌಡ ಕಿರಗಡಲು ಅವರು ಮೊದಲಿಗೆ ಸರ್ವರನ್ನೂ ಸ್ವಾಗತಿಸಿ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.

 

-ನ್ಯೂಸ್ ಡೆಸ್ಕ್, ಕೊಂಡಿನ್ಯೂಸ್.

Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Oct 05, 2019
ಹಾಸನ: ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ...
Has no content to show!

Visitors Counter

00554655
Today
This Month
Last Month
All days
64
64
5443
554655
Your IP: 114.119.141.67
2020-12-01 07:18

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…