ಸ್ಥಳೀಯ ಸುದ್ದಿ

ನೆರೆ ಪೀಡಿತ ಪ್ರದೇಶದ ಜನರ ಸಂಕಷ್ಟಕ್ಕೆ ಮಿಡಿದ ಡೈರಿ ಸರ್ಕಲ್ ಹುಡುಗ್ರು.

HASSAN: ಇವ್ರು ಕೆಲಸವಿಲ್ಲದೇ ಸುಖ ಸುಮ್ಮನೆ ಕಾಲ ಕಳೆಯುತ್ತಿದ್ದ ಹುಡುಗ್ರಾದ್ರು, ಇಂದು ತಮ್ಮ ಬಡಾವಣೆಯ ಜನರೇ ಮೆಚ್ಚುವ ಕೆಲಸ ಮಾಡಿದ್ದಾರೆ. ನೆರೆಪೀಡಿತ ಪ್ರದೇಶಕ್ಕೆ ಸಹಾಯ ಹಸ್ತ ನೀಡುವ ಮೂಲಕ ತಮ್ಮ ತಮ್ಮ ಕುಟುಂಬದವರಿಂದ ಬೇಷ್ ಎನಿಸಿಕೊಂಡಿದ್ದಾರೆ.

ಹೌದು, ಇವರೆಲ್ಲಾ ಹಾಸನದ ಡೈರಿ ಸಮೀಪವಿರುವ ಸತ್ಯವಂಗಲ ಬಡಾವಣೆಯ ಹುಡುಗ್ರು. ಕೆಲವರು ಇವರುಗಳನ್ನ ನೋಡಿ ವೇಸ್ಟ್ ಬಾಡಿಗಳ ಸುಖಾ ಸುಮ್ಮನೆ ಅಲೆಯುವ ಬದಲು ಏನಾದ್ರು ಕೆಲ್ಸ ಮಾಡಿ ಅಂತ ಬೈದವರೆಷ್ಟೋ...ಆದ್ರೆ ಅವರೆಲ್ಲಾ ಇಂದು ಇವರ ಬೆನ್ನು ತಟ್ಟಿದ್ದಾರೆ. ಅದಕ್ಕೆ ಯಾರನ್ನ ಅಲ್ಲೆಗಳೆಯಬಾರ್ದು ಅಂತ ಹೇಳೋದು ಇದಕ್ಕೆ.

ಕಳೆದ 15 ದಿನಗಳ ಹಿಂದೆ ರಾಜ್ಯದಲ್ಲಿ ಆರ್ಭಟಿಸಿದ ವರುಣನ ರೌದ್ರನರ್ತನಕ್ಕೆ ಕರ್ನಾಟಕದ ಹಲವು ಭಾಗ ತತ್ತರಿಸಿಹೋಗಿತ್ತು. ದಶಕಗಳಿಂದ ಬರನೀಗಿಸಲು ಬಾರದ ಮಳೆರಾಯ ಕೇವಲ 4 ದಿನದಲ್ಲಿ ಬಂದು ಬರವನ್ನಲ್ಲಾ, ಊರನ್ನೇ ಕೊಚ್ಚಿಕೊಂಡು ಹೋಗುವಂತೆ ಮಾಡಿ ಅಲ್ಲಿನ ಜನರ ಬದುಕನ್ನ ಬೀದಿಗೆ ತಂದು ಬಿಟ್ಟಿದ್ದ. ಮಳೆ ಬರಲಿ ಎಂದು ಪ್ರಾರ್ಥಿಸುತ್ತಿದ್ದವರು ಸಾಕಪ್ಪ ಮಳೆರಾಯ ನಿಲ್ಲಿಸು ನಿನ್ನ ರೌದ್ರನರ್ತನವನ್ನ ಎಂದು ಬೇಡಿಕೊಂಡವರೆಷ್ಟೋ ಅಂತಹ ಕುಟುಂಬಗಳಿಗೆ ಈ ಡೈರಿ ಸರ್ಕಲ್ ಹುಡುಗ್ರು ನೆರವಿನ ಹಸ್ತ ನೀಡಿದ್ದಾರೆ.

ಪ್ರವಾಹ ಪೀಡಿತ ಸಂತ್ರಸ್ಥರ ಕುಟುಂಬಗಳಿಗೆ ರಾಜ್ಯ ಸರ್ಕಾರವಷ್ಟೆಯಲ್ಲದೇ, ಖಾಸಗಿ ಸಂಸ್ಥೆಗಳಿಂದ ಹಿಡಿದು ರಾಜ್ಯದ ನಾನಾ ಭಾಗಗಳಿಂದ ಎಲ್ಲಾ ರೀತಿಯ ನೆರವು ಹರಿದು ಬರುತ್ತಿದೆ. ಅಂತಹುದರಲ್ಲಿ ಇವರು ವಿಭಿನ್ನವಾಗಿ ನೆರವು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕೆಲಸವಿಲ್ಲದೇ ಅಲೆದಾಡುತ್ತಿದ್ದ ಹುಡುಗ್ರು ನೆರ ಸಂತ್ರಸ್ಥರ ಪರಿಹಾರಕ್ಕಾಗಿ ಬಡಾವಣೆಗಳಿಗೆ ಭೇಟಿ ನೀಡಿ ಸುಮಾರು 7-8ಲಕ್ಷ ರೂ ಮೌಲ್ಯದ ಆಹಾರ ಸಾಮಗ್ರಿಗಳನ್ನ ಸಂಗ್ರಹಿಸಿ ಲಾರಿಯಲ್ಲಿ ಖುದ್ದು ತಾವೇ ಹೋಗಿ ತಲುಪಿಸು ಕೆಲಸ ಮಾಡ್ತಿದ್ದಾರೆ.

ಸಂತ್ರಸ್ಥ ಕುಟುಂಬಗಳನ್ನ ಪಟ್ಟಿಮಾಡಿಕೊಂಡ ಇವರು ಪ್ರತಿ ಮನೆಗೆ ಬೇಕಾದ ಆಹಾರ ಪದಾರ್ಥಗಳನ್ನ ಬಹಳ ಅಚ್ಚುಕಟ್ಟಾಗಿ ವಿಲೇವಾರಿ ಮಾಡ್ತಿದ್ದಾರೆ. ಬಾಗಲಕೋಟೆಯ ರಾಮತಾಳ, ಹಿರಮಾಗಿ, ಐಹೋಳೆ, ನೀಲಗುಮದ, ಶಿವಯೋಗಿ ಮಂದಿರ ಹೀಗೆ 5 ಗ್ರಾಮಗಳಿಗೆ ತೆರಳಿ ಪ್ರತಿ ಕುಟುಂಬಕ್ಕೆ ತಲಾ 1 ಕೆಜಿಯಂತೆ ಬೇಳೆ, ಕಾಳು, ಆಹಾರ ಪದಾರ್ಥಗಳನ್ನ ವಿತರಣೆ ಮಾಡ್ತಿದ್ದಾರೆ. ಇದ್ರ ಜೊತೆಗೆ ಮೈತುಂಬಾ ಹೊದಿಯಲು ರಗ್ಗು, ಹಾಸಿಗೆ, ದಿಂಬು, ಹೀಗೆ ಕುಟುಂಬಕ್ಕೆ ಅವಶ್ಯಕತೆಗೆ ತಕ್ಕಂತೆ ಒಂದೊಂದು ಬಾಕ್ಸ್ ಮಾಡಿ ಪ್ರತಿ ಮನೆಗೆ ಅಚ್ಚುಕಟ್ಟಾಗಿ ವಿತರಣೆ ಮಾಡ್ತಿದ್ದಾರೆ.

ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕುತ್ತಿರುವ ಮತ್ತು ಕೆಲಸದಲ್ಲಿರುವ ಕೆಲವು ಹುಡುಗರು ಸಂಜೆಯಾದ್ರೆ ಡೈರಿ ಸರ್ಕಲ್ ಬಳಿ ಹರಟೆಹೊಡೆಯುತ್ತಾ ಕಾಲಕಳೆಯುತ್ತಿದ್ರು. ಆದ್ರೆ ಇವತ್ತು ಅದೇ ಹುಡುಗ್ರು ಎಲ್ಲರು ಮೆಚ್ಚುವಂತಹ ಕೆಲಸ ಮಾಡಿದ್ದು, ನಿಜಕ್ಕೂ ಇದೊಂದು ಮಾನವೀಯತೆ ಮತ್ತೊಂದು ಮುಖ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ.

 

BEAURE REPORT, KONDI NEWS

Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Oct 05, 2019
ಹಾಸನ: ಸಂಸದರು ಕರೆದಿದ್ದ ಸಭೆಯ ಬಳಿಕ ಅವರೇ ತರಿಸಿಕೊಟ್ಟ ...
Has no content to show!

Visitors Counter

00554678
Today
This Month
Last Month
All days
87
87
5443
554678
Your IP: 3.238.190.82
2020-12-01 08:10

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…