ಸ್ಥಳೀಯ ಸುದ್ದಿ

ಅಪರಾಧಿಯನ್ನ ಶಿಕ್ಷಿಸದಂತೆ ಒತ್ತಡ ಹೇರಬೇಡಿ :  ಎಸ್ಪಿ ಡಾ. ರಾಮ್ ನಿವಾಸ್ ಸೆಪಟ್

ಅರಸೀಕೆರೆ: ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಯಾರೇ ತಪ್ಪು ಮಾಡಿದ್ರು ಅವರಿಗೆ ಶಿಕ್ಷೆಕೊಡಿಸುವ ಜವಾಬ್ದಾರಿ ನಮ್ಮದು. ಆದ್ರೆ ಯಾರು ಯಾವುದೇ ರೀತಿಯ ಒತ್ತಡ ತಂದು ಅಪರಾಧಿಯನ್ನ ಶಿಕ್ಷಿಸದಂತೆ ತಡೆಯಬಾರದು ಎಂದು ನೂತನ  ಎಸ್ಪಿ ಡಾ. ರಾಮ್ ನಿವಾಸ್ ಸೆಪಟ್ ಕೆಲವು ರಾಜಕಾರಣಿಗಳಿಗೆ ಪರೋಕ್ಷವಾಗಿ ಟಾಂಕ್ ಕೊಟ್ರು.

ಅರಸೀಕೆರೆ ನಗರ ಠಾಣೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದ್ರು. ಕಾನೂನು ಸುವ್ಯವಸ್ಥೆ ಕಾಪಾಡುತ್ತಾ ಅಮಾಯಕರ ರಕ್ಷಣೆ ಮಾಡಬೇಕಾಗಿರುವುದು ನಮ್ಮ ಕೆಲಸ. ಶಾಂತಿಯನ್ನು ಕದಡುವ ಯಾರೇ ಆದರೂ ನಿರ್ದಾಕ್ಷಣ್ಯ ಕ್ರಮಕೈಗೊಳ್ಳದೇ ಬಿಡುವುದಿಲ್ಲ. ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಯಾರೂ ಕೂಡ ಪೊಲೀಸ್ ಅಧಿಕಾರಗಳಿಗೆ ಯಾವುದೇ ರೀತಿ ಒತ್ತಡ ಹಾಕದೇ ತನಿಖೆಗೆ ಸಹಕಾರ ನೀಡಬೇಕು. ಎಂದ ಅವರು ಅರಸೀಕೆರೆ ತಾಲ್ಲೂಕಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಮಯಾನುಸಾರ ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.

ಅರಸೀಕೆರೆ ನಗರದಲ್ಲಿ ಕೆಲವು ಪ್ರಭಾವಿಗಳು ಮಟ್ಕಾದಂಧೆ ನಡೆಸುತ್ತಿದ್ದಾರೆ. ನಗರದಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಟ್ರಾಫಿಕ್ ಸಮಸ್ಯೆ ತಲೆನೋವಾಗಿದೆ. ಪುಟ್ ಪಾತ್ ಒತ್ತುವರಿಯಿಂದ ಮಕ್ಕಳಿಂದ ಹಿಡಿದ ವಯೋವೃದ್ಧರ ತನಕ ಓಡಾಡಲು ತೊಂದರೆಯಾಗುತ್ತಿದೆ. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟ ಇತ್ಯಾದಿ ಸಮಸ್ಯೆಗಳ ಕುರಿತು ಸಾರ್ವಜನಿಕರು ತಮ್ಮ ಅಳಲನ್ನು ಸಭೆಯಲ್ಲಿ ಎಸ್ಪಿ ಮುಂದೆ ತೋಡಿಕೊಂಡರು. ಉತ್ತಮ ಕೆಲಸ ನಿರ್ವಹಿಸತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಕೆಲ ಜನಪ್ರತಿನಿಧಿಗಳು ಹಾಕುತ್ತಿರುವ ಒತ್ತಡದ ಬಗ್ಗೆಯೂ ತಾವು ಗಮನ ಹರಿಸಬೇಕೆಂದು ಮನವಿ ಮಾಡಿದ್ರು.

ಈ ಸಂದರ್ಭದಲ್ಲಿ ನಗರಸಭೆ ಕಾರ್ಯವ್ಯಾಪ್ತಿಗೆ ಬರುವ ಸಮಸ್ಯೆಗಳನ್ನ ಬಿಜೆಪಿ ನಗರಧ್ಯಾಕ್ಷ ಮನೋಜ್ ಕುಮಾರ್ ಪೊಲೀಸರ ಬಳಿ ಹೇಳಿದ್ದು,   ನಗರಸಭೆಯ ವೈಫಲ್ಯವನ್ನು ಎತ್ತಿ ತೋರಿಸುವಂತಿತ್ತು. ಸಭೆಯಲ್ಲಿ ಅರಸೀಕೆರೆ ಡಿವೈಎಸ್ಪಿ ಎಲ್.ನಾಗೇಶ್, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಮಾಜ, ಸಂಘ ಸಂಸ್ಥೆ ಮುಖಂಡರುಗಳು ಉಪಸ್ಥಿತರಿದ್ದರು.

> ರಾಮ್ ಪ್ರಸಾದ್, ಕೊಂಡಿ ನ್ಯೂಸ್, ಅರಸೀಕೆರೆ.

Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Sep 08, 2019
ಹಾಸನ: ತವರಿಗೆ ಹೋಗುವುದಾಗಿ ಅಮ್ಮ ಮಗ ಕಾಲುವೆಗೆ ಹಾರಿ ...
Has no content to show!

Visitors Counter

00554647
Today
This Month
Last Month
All days
56
56
5443
554647
Your IP: 66.249.66.146
2020-12-01 07:03

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…