ಸ್ಥಳೀಯ ಸುದ್ದಿ

ಶ್ರವಣಬೆಳಗೊಳದ ಜೈನ ಮಠಕ್ಕೆ ಚಿರತೆ ಆಗಮನ

ಶ್ರೀ ಕ್ಷೇತ್ರ ದಕ್ಷಿಣ ಜೈನಕಾಶಿ ಶ್ರವಣಬೆಳಗೊಳ ಜೈನ ಮಠಕ್ಕೆ ಚಿರತೆಯೊಂದು ಬಂದು ಹೋಗಿರುವ ಘಟನೆ ತಡವಾಗಿ ಬಂದಿದ್ದು, ಮಠದಲ್ಲಿನ ಮಂದಿದೆ ಆತಂಕ ಮೂಡಿಸಿದೆ.

ಕಳೆದ ಭಾನುವಾರ ರಾತ್ರಿ ಚಿರತೆಯೊಂದು ಆಹಾರವನ್ನು ಹುಡುಕಿಕೊಂಡು ದೊಡ್ಡಬೆಟ್ಟದ ಕಡೆಯಿಂದ ಶ್ರೀ ಮಠಕ್ಕೆ ಆಗಮಿಸುವ ಕಾಲುದಾರಿಯಲ್ಲಿ ಆಗಮಿಸಿ ಶ್ರೀಮಠದ ಅಡುಗೆಮನೆಯ ಎದುರಿಗಿರುವ ಹೊರಾಂಗಣಕ್ಕೆ ಬಂದು ಸ್ವಲ್ಪ ಸಮಯ ಅಕ್ಕ-ಪಕ್ಕದಲ್ಲಿ ಸುತ್ತಾಡಿ ಬಳಿಕ ಅಡುಗೆ ಮನೆಯ ನೆಲಮಹಡಿ ಒಳಗೆ ಹೋಗಿದೆ.

ನೆಲಮಹಡಿಯಲ್ಲಿಯೂ ಏನು ಸಿಗದ ಹಿನ್ನೆಲೆಯಲ್ಲಿ ತಡರಾತ್ರಿಯತನಕ ಜೈನಮಠದಲ್ಲಿ ನಡೆಯುತ್ತಿದ್ದ ಪೂಜಾ ಕೈಂಕರಗಳ ಶಬ್ದದಿಂದ ಹೆದರಿ ಅಲ್ಲಿಂದ ಹೊರಬಂದಿದೆ. ಇನ್ನು ಅಡುಗೆ ಮನೆಯ ಪಕ್ಕದಲ್ಲಿಯೇ ಶ್ರೀಮಠದ ವಿದ್ಯಾಸಂಸ್ಥೆ ಇದ್ದು ಮಕ್ಕಳು ಆಟವಾಡುವ ಜಾಗದಲ್ಲಿಯೂ ಓಡಾಡಿ ನಂತರ ಪಕ್ಕದ ಚರಂಡಿಯ ಮೂಲಕ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬಂಡೆಯ ಸಮೀಪದ ಕುರುಚಲು ಗಿಡದ ಕಡೆಗೆ ಹೆಜ್ಜೆಯಿಟ್ಟಿದೆ.

ಬೆಟ್ಟದ ತಪ್ಪಲಿನಲ್ಲಿರುವ ಕಲ್ಲುಬಂಡೆಯ ಮೇಲೆ ಹಿಂದೆಯೂ ಸಾಕಷ್ಟು ಬಾರಿ ಚಿರತೆಗಳು ಕಾಣಿಸಿಕೊಂಡಿದ್ದವು. ಕಳೆದ ಬಳಿಕ ಪಟ್ಟಣದ ಪೊಲೀಸ್ ಠಾಣೆಯ ಎದುರು ಆಗಮಿಸಿದ ಚಿರತೆಯೊಂದು ನಾಯಿಯನ್ನು ಹೊತ್ತುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದಾದ ಬಳಿಕ ಸಾರ್ವಜನಿಕರ ಒತ್ತಾಯದ ಹಿನ್ನಲೆಯಲ್ಲಿ ಬೆಟ್ಟದ ಸಮೀಪ ವಿರುವ ಜಿನ್ನಾನಾಥಪುರದಲ್ಲಿ ಬೋನನ್ನು ಇಡಲಾಗಿತ್ತು ಇಡಲಾಗಿದ್ದ ಪರಿಣಾಮ ಎರಡು ಚಿರತೆಗಳು ಸೆರೆಯಾಗಿದ್ದವು.

ಈದಾದ ಬಳಿಕ ಮಸ್ತಕಾಭಿಷೇಕ ದಲ್ಲಿ ಮುನಿವರ್ಯರು ತಂಗಿದ್ದ ವಸತಿ ನಿಲಯದ ಅನತಿದೂರದಲ್ಲಿರುವ ಕುರುಚಲು ಪ್ರದೇಶದಿಂದ ಮತ್ತೆ ನಗರಕ್ಕೆ ಪ್ರವೇಶ ಮಾಡಿ ಜೈನಮಠದೊಳಗೆ ಬಂದಿರುವುದು ಮಠದವರಿಗೆ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಜನರನ್ನ ಕೂಡ ಆತಂಕಕ್ಕೀಡು ಮಾಡಿದೆ.

ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತು ಚಂದ್ರಗಿರಿಯ ಬೆಟ್ಟದ ನಡುವೆ ಮತ್ತು ತಪ್ಪಲಿನಲ್ಲಿರುವ ಚಿರತೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂಬುದು ಶ್ರವಣಬೆಳಗೊಳ ಜನರ ಆಗ್ರಹ.

Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by terrel
- Aug 14, 2019
  ಕೊಡಗಿನಲ್ಲಿ ಮಳೆ ಹಿನ್ನೆಲೆ: ಸುರಕ್ಷಿತ ಸ್ಥಳಕ್ಕೆ ...
Has no content to show!

Visitors Counter

00554672
Today
This Month
Last Month
All days
81
81
5443
554672
Your IP: 185.191.171.8
2020-12-01 07:51

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…