ರಾಜಕೀಯ

ಡಿಕೆಶಿ ಅರೆಸ್ಟ್ ಆದ್ರೆ ಸಾರ್ವಜನಿಕವಾಗಿ ಆತ ಸಿಂಪತಿ ಗಿಟ್ಟಿಸಿಕೊಳ್ತಾನೆ

ಹಾಸನ: ನಮ್ಮ ಪಕ್ಷ ಡಿಕೆಶಿ ವಿರುದ್ದ ದ್ಚೇಷದ ರಾಜಕಾರಣ ಮಾಡ್ತಿಲ್ಲ ನಾನು ಪ್ರಾಮಾಣಿಕವಾಗಿ ಹೇಳ್ತೇನೆ ಶಿವಕುಮಾರ್ ಬಂಧನವಾಗಲಿ ಎನ್ನೋ ಬಯಕೆ ನಮಗಿಲ್ಲ. ಡಿಕೆಶಿ ಅರೆಸ್ಟ್ ಆದ್ರೆ ಸಾರ್ವಜನಿಕವಾಗಿ ಆತ ಸಿಂಪತಿ ಗಿಟ್ಟಿಸಿಕೊಳ್ತಾನೆ ಅಂತ ನಮಗೆ ಗೊತ್ತು ಅಂತ ಕಾನೂನು ಮತ್ತು ಸಂಸದೀಯ ಸಚಿವ ಸಚಿವ ಮಾಧುಸ್ವಾಮಿ ಡಿಕೆಶಿ ವಿರುದ್ದ ಖಾರವಾಗಿಯೇ ಮಾತನಾಡಿದ್ರು. 

ಸಕಲೇಶಪುರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ ಅವರು ಜಾರಿ ನಿರ್ದೇಶನಾಲಯ ಡಿಕೆಶಿಯವರನ್ನ ಅಪರಾಧಿ ಎಂದು ತೀರ್ಮಾನ ಮಾಡಿಲ್ಲ. ಯಾವುದೇ ತನಿಖಾ ಸಂಸ್ಥೆ ತನಿಖೆಗೆ ಸಹಕರಿಸದಿದ್ದರೆ ಬಂಧನ ಮಾಡೋದು ಸಹಜ. ತನಿಖಾ ಹಂತದಲ್ಲಿ ಸಹಕಾರ ಮಾಡಿಲ್ಲ ಎಂದು ಬಂಧಿಸಿದ್ದಾರೆ. ಅಂತ ತಮ್ಮ ಮಾತನ್ನ ಸಮರ್ಥನೆ ಮಾಡಿಕೊಂಡರು. 

ಇನ್ನು ನಮ್ಮ ಪಕ್ಷ ಡಿಕೆಶಿ ವಿರುದ್ದ ದ್ಚೇಷದ ರಾಜಕಾರಣ ಮಾಡ್ತಿಲ್ಲ ಎಂದ ಸಚಿವ. ಹಣ ಇರಬಾರದು ಎಂದಲ್ಲ, ಇರೋ ಹಣಕ್ಕೆ ದಾಖಲೆ‌ ಕೊಡಬೇಕು. ಬಿಜೆಪಿಯಿಂದ ದ್ವೇಷದ ರಾಜಕಾರಣ ಎಂದು ಆರೋಪಿಸಿರೋ ಕಾಂಗ್ರೆಸ್ ಗೆ ಸಚಿವ ಮಾಧುಸ್ವಾಮಿ ತಿರುಗೇಟು ನಿಡಿದ್ರು. 

ಸಿಎಂ‌ಗೂ ಕೆಎಂಎಫ್ ಗೂ ಸಂಬಂಧವೇ ಗೊತ್ತಿಲ್ಲ. ಅವರು ಇಷ್ಟ ಬಂದ ಹಾಗೆ ಚುನಾವಣೆ ಮಾಡೋಕೆ‌ ಹೋಗಿದ್ರು ಅದಕ್ಕೆ ತಡೆ ನೀಡಿ ಚುನಾವಣೆ ಮಾಡಲಾಗಿದೆ. ಇದರಲ್ಲಿ ಪಿತೂರಿ ಏನಿದೆ ಎಂದು ಮರು ಪ್ರಶ್ನೆ ಮಾಡಿದ ಸಚಿವ, ಆಸೆ ಇಲ್ಲವೆಂದ ಮೇಲೆ‌ ಚುನಾವಣೆ ಮುಗಿದ ಬಳಿಕ ಏಕೆ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದ್ರು..?  ಎಂದು ಗಂಭೀರವಾಗಿ ಮರು ಪ್ರಶ್ನೆಮಾಡಿ, ಸಿಎಂ ವಿಶ್ವಾಸಮತ ಕೇಳೋ ವೇಳೆ, ರೇವಣ್ಣ ಪ್ಲಾನ್ ಮಾಡಿ ಕೆಎಂಎಫ್ ಚುನಾವಣೆ ನಡೆಸೋಕೆ‌‌ ಹೋಗಿದ್ರು. ಅವರು ಇಲ್ಲಿ ವಿಶ್ವಾಸ ಮತಕ್ಕೆ ಯಡಿಯೂರಪ್ಪ ವಿರುದ್ಧ ಕೈ ಎತ್ತಬೇಕಿತ್ತಾ, ಇಲ್ಲಾ ಎಲೆಕ್ಷನ್ ಮಾಡಬೇಕಿತ್ತಾ. ಅವರ ಮಟ್ಟಕ್ಕೆ ನಾವು ಇಳಿಯೋದಿಲ್ಲ. ಅಂತ ಮಾಜಿ ಸಚಿವ ರೇವಣ್ಣ ವಿರುದ್ಧವೂ ಕಿಡಿಕಾರಿದ್ರು.

KONDI NEWS, HASSAN

Last modified on Saturday, 07 September 2019 20:10
Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Oct 05, 2019
ಹಾಸನ: ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ...
Has no content to show!

Visitors Counter

00554655
Today
This Month
Last Month
All days
64
64
5443
554655
Your IP: 114.119.141.67
2020-12-01 07:18

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…