ಕನಕಪುರ ಬಂಡೆಯ ಬಂಧನ ಮೈತ್ರಿ ಪಕ್ಷದಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ:

ಹಾಸನ: ಕಾಂಗ್ರೆಸ್ ನಾಯಕ ಡಿ.ಕೆ.‌ ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ರು. 

ಹಾಸನ ನಗರದ ಕಾಂಗ್ರೆಸ್ ಕಚೇರಿಂದ ಹೊರಟ ಪ್ರತಿಭಟನೆ ಹೇಮಾವತಿ ಪ್ರತಿಮೆ ಮೂಲಕ ಸಾಗಿ ಎನ್.ಆರ್. ವೃತ್ತದ ಬಳಿ ಬಂದು ಟೈರ್ ಗೆ ಬೆಂಕಿ ಹಂಚಿ ತಮ್ಮ ಆಕ್ರೋಶವನ್ನ ಹೊರಹಾಕಿದ್ರು. ಇದೇ ವೇಳೆ ಬಿಜೆಪಿಯ ಆಮಿಷ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದಲ್ಲಿ ಬಿಜೆಪಿ ತೊಲಗಬೇಕು ಅಂತ ಆಗ್ರಹಿಸಿಪ್ರತಿಭಟನೆ ನಡೆಸಿದರು. 

ಅರಸೀಕೆರೆಯ ಕಾಂಗ್ರೆಸ್ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದ ಬಳಿ ಕೆಲಕಾಲ ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು ಡಿಕೆ ಶಿವಕುಮಾರ್ ಅವರು ಕಳೆದ ವರ್ಷದಿಂದ ಜೊತೆಗೆ ಕಳೆದ ನಾಲ್ಕು ದಿನಗಳಿಂದ ಕೂಡ ಅಧಿಕಾರಿಗಳು ಕೇಳಿದ ಎಲ್ಲ ಮಾಹಿತಿಗಳನ್ನು ನೀಡಿದರು ಕೂಡ ದ್ವೇಷದ ರಾಜಕಾರಣ ಮಾಡಿ ಬಂಧಿಸಲಾಗಿದೆ ಹಾಗಾಗಿ ಯಾವುದೇ ತಪ್ಪು ಮಾಡಿದ ಡಿಕೆಶಿ ಅವರನ್ನು ನ್ಯಾಯಾಲಯ ದೋಷಮುಕ್ತ ವಾಗಿ ಹೊರಗೆ ಕಳಿಸುತ್ತದೆ ಎಂತ ಭರವಸೆಯ ಮಾತುಗಳನ್ನಾಡಿ ಬಿಜೆಪಿಯ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಮಾಡಿದರು.

ಇನ್ನು ನಿನ್ನೆ ಡಿಕೆಶಿ ಬಂಧನವಾದ ಬಳಿಕ ಜಿಲ್ಲೆಯ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡುರಾತ್ರಿಯಲ್ಲಿ ಹೊಸ ಬಸ್ ನಿಲ್ದಾಣದ ಸಮೀಪ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ಇವಳೇ ಸ್ಥಳಕ್ಕಾಗಮಿಸಿದ ಪೊಲೀಸರಿಗೂ ಕೂಡ ಬಂದಿ ಸುವುದಾದರೆ  ನಮ್ಮ ನಾಯಕರು ಯಾವುದೇ ತಪ್ಪು ಮಾಡಿಲ್ಲ ದ್ವೇಷದ ರಾಜಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಇವತ್ತು ಮತ್ತೆ ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ ನೇತೃತ್ವದಲ್ಲಿ  ತಾಲೂಕು ಕಚೇರಿ ಆವರಣದಿಂದ  ಮೆರವಣಿಗೆ ಮೂಲಕ ಸಾಗಿ ಬಳಿಕ ಶಾಂತಿಯುತವಾಗಿ ಕೃಷ್ಣರಾಜ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಡಿಕೆಶಿ ಬೆಂಬಲಕ್ಕೆ  ಇಡೀ ರಾಜ್ಯವೇ ನಿಂತಿದೆ ಯಾವುದೇ ತಪ್ಪು ಮಾಡದ ಅವರನ್ನು  ಸುಖಾಸುಮ್ಮನೆ  ತನಿಖೆಗೆ ಒಳಪಡಿಸಿ  ದ್ವೇಷ ರಾಜಕಾರಣ  ತೋರುತ್ತಿದೆ 70 ವರ್ಷಗಳ ರಾಜಕಾರಣ ನೋಡಿದ್ದೇವೆ ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ  ನ್ಯಾಯಾಲಯ ನಿಮಗೆ ದೋಷಮುಕ್ತ ಅಂತ ತೀರ್ಪನ ನೀಡುತ್ತೆ ಅಂತ ಆಶಾಭಾವನೆ ವ್ಯಕ್ತಪಡಿಸಿದರು.

 

ಇನ್ನು ಅರಕಲಗೂಡು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ನೇತೃತ್ವದಲ್ಲಿ ಪಟ್ಟಣದ ಅನಕೃ ವೃತ್ತದಲ್ಲಿ ಜಮಾಯಿಸಿದ ಅಪಾರ ಕಾರ್ಯಕರ್ತರು ಕೆಲಹೊತ್ತು ಹೊಳೆನರಸೀಪುರ- ಹಾಸನ ಮಾರ್ಗದ ರಸ್ತೆ ತಡೆದು ಟೈರ್ ಸುಟ್ಟು ಬಿಜೆಪಿ ವಿರುದ್ದ ಘೋಷಣೆ ಕೂಗಿದರು.

ಕೇಂದ್ರದ ಬಿಜೆಪಿ ಸರ್ಕಾರ ಇಡಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರಿಗೆ ಭಾರಿ ಕಿರುಕುಳ ನೀಡುತ್ತಿದ್ದು, ಕಳೆದ ‌ವರ್ಷ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ದುಡಿದ ಶಿವಕುಮಾರ್ ಅವರ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳುವ ಸಲುವಾಗಿ ಬಿಜೆಪಿ ಈಗ ಇಡಿ ಅಧಿಕಾರಿಗಳ ಮೂಲಕ ಡಿಕೆಶಿ ಅವರನ್ನು ಬಂಧಿಸಿದ್ದು,  ಪ್ರಧಾನಿ ಮೋದಿ ಅವರು ಎಲ್ಲರನ್ನು ಸಮಾನವಾಗಿ ಕಾಣದೆ ರಾಜಕೀಯ ಹಗೆ ಸಾಧಿಸುತ್ತಿರುವುದು ಖಂಡನೀಯ, ಕಾಂಗ್ರೆಸ್ ನಾಯಕರನ್ನು ಬಂಧಿಸಿದರೆ ಇಂಥ ಕುಚೋದ್ಯಗಳಿಗೆಲ್ಲಾ ಪಕ್ಷದ ಕಾರ್ಯಕರ್ತರು ಹೆದರುವುದಿಲ್ಲ, ಜೈಲಿನಿಂದಲೇ ಹೋರಾಟ ಶುರು ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಷಡ್ಯಂತ್ರಗಳಿಗೆ ಬಗ್ಗುವ ಜಾಯಮಾನ ಹೊಂದಿಲ್ಲ ಎಂದರು.

ಒಟ್ಟಾರೆ ಕನಕಪುರದ ಬಂಡೆ ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದೇ ಕರೆಯಲಾಗಿದ್ದ ಡಿಕೆಶಿ ಬಂಧನದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಕೂಡ ಪ್ರತಿಭಟನೆಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು ಡಿಕೆಶಿ ಅವರನ್ನು ಕೂಡಲೇ ಬಂಧಮುಕ್ತ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಕೂಡ ಜಿಲ್ಲಾ ಕಾಂಗ್ರೆಸ್ ಬಿಜೆಪಿಗೆ ಎಚ್ಚರಿಕೆ ನೀಡಿತು.

KONDINEWS, HASSAN

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by terrel
- Aug 14, 2019
  ಕೊಡಗಿನಲ್ಲಿ ಮಳೆ ಹಿನ್ನೆಲೆ: ಸುರಕ್ಷಿತ ಸ್ಥಳಕ್ಕೆ ...
Has no content to show!

Visitors Counter

00554672
Today
This Month
Last Month
All days
81
81
5443
554672
Your IP: 185.191.171.8
2020-12-01 07:51

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…