ಹಾಸನ: ಹಗಲು ಒಂದು ಕಡೆ ರಾತ್ರಿ ಒಂದು ಇರುವವರು ಡಿಕೆಶಿ ಪರ ಮಾರನಾಡುತ್ತಾರೆ ಎಂದು ಮಾಜಿ ಸಚಿವ ಹೆಚ್ .ಡಿ.ರೇವಣ್ಣ ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಅವರಿಂದು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಾವು ಡಿಕೆಶಿ ಪರ ನಿಕಟ ಸಂಬಂಧ ಹೊಂದಿದ್ದೇವೆ.ಎಲ್ಲವನ್ನೂ ನಾವು ಬಹಿರಂಗವಾಗಿ ಹೇಳಬೇಕಿಲ್ಲ ಎಂದು ಚಾಟಿ ಬೀಸಿದರು.
ಡಿಕೆಶಿ ಬಂಧನ ವಿರೋಧಿಸಿ ಒಕ್ಕಲಿಗ ಸಮುದಾಯದವರು ನಡೆಸಿದ ಪ್ರತಿಭಟನೆಗೆ ಹೆಚ್.ಡಿ.ಕೆ. ಬಾಗಿಯಾಗದ ವಿಚಾರವಾಗಿ ಮಾತನಾಡಿದ ರೇವಣ್ಣ ಡಿಕೆಶಿ ಮನೆಗೆ ಹೋಗಿ ಧೈರ್ಯ ತುಂಬಿದ್ದಾರೆ. ಕೆಲವರಿಗೆ ಬೀಗರ ಔತಣಕ್ಕೆ ಓಡಾಡುವುದಣೆ ಕೆಲಸವಾಗಿದೆ ಟಾಂಗ್ ನೀಡಿದರು.
ನಾನೊಬ್ಬ ಅಣ್ಣನಾಗಿ ಕುಮಾರಸ್ವಾಮಿಗೆ ಬುದ್ದಿ ಹೇಳಿದ್ದೇನೆ. ನಮಗೆ ರಾಜಕೀಯ ಶಾಶ್ವತವಲ್ಲ. ನಾವು ಗಂಭೀರವಾಗಿ ಇರಬೇಕು ಎಂದು ಬುದ್ದಿಹೇಳಿದ್ದೇನೆ ಎಂದರು.
ಸರಿಯಾದವರನ್ನು ಇಟ್ಟುಕೊಂಡು ಓಡಾಡಬೇಕು ಎಂದು ಹೇಳಿದ್ದೇನೆ ಎಂದರು ಡಿಕೆಶಿ ಬ್ರದರ್ಸ್ ರನ್ನು ಇಡಿಯವರಿಂದ ಹೆದರಿಸಲು ಸಾಧ್ಯವಿಲ್ಲ . ಇಂತಹ ಪ್ರಕರಣಗಳನ್ನು ಎದರಿಸುವ ಸಾಮರ್ಥ್ಯ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಜೆಡಿಎಸ್ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ದೇವೇಗೌಡರ ಕುಟುಂಬವನ್ನು ರಾಜ್ಯದ ಜನತೆ ಕೈಬಿಡುವುದಿಲ್ಲ .ಚಲುವರಾಯಸ್ವಾಮಿ ಅವರನ್ನು ಕಳೆದ ಚುನಾವಣೆಯಲ್ಲಿ ಕಸದಬುಟ್ಟಿಗೆ ಎಸೆದುಹಾಕಲಾಗಿದೆ ಎಂದು ವ್ಯಂಗ್ಯವಾಡಿದರು.