ವೈದ್ಯರ ನಿರ್ಲಕ್ಷದಿಂದ 11 ತಿಂಗಳ ಮಗವೂಂದು ಸಾವಿಗೀಡಾಗಿರುವ ಘಟನೆ ಹಾಸನ ನಗರದ ಜಯಶೀಲ ಆಸ್ಪತ್ರೆಯಲ್ಲಿ ನಡೆದಿದೆ.
ಅನಾರೋಗ್ಯದಿಂದ ಆಸ್ಪತ್ರೆಗೆ ಕರೆದುತಂದ ಮಗುವನ್ನ ಆರೋಗ್ಯ ತಪಾಸಣೆಗೆ ಪರೀಕ್ಷೆಗೆ ಒಳಪಡಿಸದೆ ದೂರವಾಣಿ ಮುಖಾಂತರ ತನ್ನ ಆಸ್ಪತ್ರೆಯ ಸಿಬ್ಬಂದಿಗೆ ಚುಚ್ಚುಮದ್ದು ಕೊಡುವಂತೆ ಹೇಳಿ ಮಗುವಿನ ಪ್ರಾಣ ತೆಗೆದಿದ್ದಾರೆ ಎಂಬುದು ಮೃತ ಮಗುವಿನ ಪೋಷಕರ ಗಂಭೀರ ಆರೋಪ.
ತನುಷ್ ( 11 ತಿಂಗಳು) ವೈದ್ಯರ ನಿರ್ಲಕ್ಷ್ಯಕ್ಕೆ ಒಳಗಾಗಿ ಸಾವಿಗೀಡಾಗಿರುವ ಪುಟ್ಟ ಕಂದಮ್ಮ. ಹಾಸನ ತಾಲ್ಲೂಕಿನ ಸಾಣೇಹಳ್ಳಿಯ ಚಂದ್ರಶೇಖರ್ ಮತ್ತು ಪವಿತ್ರಾ ದಂಪತಿಯ ಪುತ್ರ ತನುಷ್ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಮಧ್ಯಾಹ್ನ ಚಿಕಿತ್ಸೆಗಾಗಿ ನಗರದ ಪೆನ್ಶನ್ ಮೊಹಲ್ಲಾ ಬಡಾವಣೆಯಲ್ಲಿರುವ ಜಯಶೀಲ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ದೂರವಾಣಿಯ ಮುಖಾಂತರ ಪೋಷಕರು ಮಗುವಿಗೆ ವಾಂತಿಭೇದಿ ಕಾಣಿಸಿಕೊಂಡಿದ್ದು ಚಿಕಿತ್ಸೆ ನೀಡಬೇಕೆಂದು ಮನವಿ ಮಾಡಿದಾಗ, ದೂರವಾಣಿಯ ಮುಖಾಂತರವೇ ತನ್ನ ಆಸ್ಪತ್ರೆಯ ದಾದಿಗೆ ಚುಚ್ಚುಮದ್ದು ನೀಡುವಂತೆ ಹೇಳಿದ್ದಾರೆ. ವೈದ್ಯರ ಸಲಹೆಯಂತೆ ಆಸ್ಪತ್ರೆಯಲ್ಲಿದ್ದ ರೂಪ ಮಗುವಿಗೆ ಚುಚ್ಚುಮದ್ದು ನೀಡಿದ್ದು, ಚಿಕಿತ್ಸೆಗೆ ಸ್ಪಂದಿಸದ ಮಗು ಮತ್ತಷ್ಟು ಆನಾರೋಗ್ಯದಿಂದ ಚಡಪಡಿಸುತ್ತಿದ್ದ ಹಿನ್ನಲೆ ತಕ್ಷಣ ಅವರನ್ನು ಮತ್ತೊಂದು ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಪುಟ್ಟ ಕಂದಮ್ಮನ ಪ್ರಾಣಪಕ್ಷಿ ಹಾರಿಹೋಗಿತ್ತು.
ವಿಷಯ ತಿಳಿದ ಪೋಷಕರು ತಕ್ಷಣ ಆಸ್ಪತ್ರೆ ವೈದ್ಯರಿಗೆ ವಿಚಾರವನ್ನು ತಿಳಿಸಿದರೆ ವೈದ್ಯರು ಪೋಷಕರಿಗೆ ಧಮ್ಕಿ ಹಾಕಿದ್ರು ಅನ್ನೋ ಕಾರಣಕ್ಕೆ ಪೋಷಕರು ವೈದ್ಯರಿಗೆ ತರಾಟೆಗೆ ತೆಗೆದುಕೊಂಡಿದ್ದು, ಆಸ್ಪತ್ರೆಯ ನರ್ಸ್ ರೂಪಗೆ ಹಲ್ಲೆ ಮಾಡಿದ್ದಷ್ಟೆಯಲ್ಲದೇ ಆಸ್ಪತ್ರೆಯ ಕೆಲವು ವಸ್ತುಗಳನ್ನು ಪುಡಿ ಪುಡಿ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸೋ ಮೂಲಕ ತಹಬದಿಗೆ ತರಲು ಯಶಸ್ವಿಯಾಗಿದ್ರು.
ಇತ್ತ ಮಗುವನ್ನು ಕಳೆದುಕೊಂಡ ಪೋಷಕರ ರೋಧನೆ ಮುಗಿಲು ಮುಟ್ಟಿದೆ. ಅನಾರೋಗ್ಯವಾದ ಹಿನ್ನೆಲೆಯಲ್ಲಿ ಮಗುವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ವೈದ್ಯರ ನಿರ್ಲಕ್ಷವೇ ಇವತ್ತು ಮಗುವಿನ ಸಾವಿಗೆ ಕಾರಣಾಗಿರುವುದು ನೋವಿನ ಸಂಗತಿ.
ಆಸ್ಪತ್ರೆಗೆ ದಾಖಲಾದ ಮಗು ತುಂಬಾ ಸುಸ್ತಾಗಿತ್ತು. ತಕ್ಷಣ ವೈದ್ಯರನ್ನು ಸಂಪರ್ಕಿಸಿದಾಗ ಅವರು ದೂರವಾಣಿ ಯಲ್ಲಿಯೇ ಚುಚ್ಚುಮದ್ದು ನೀಡುವಂತೆ ಹೇಳಿದ್ರು. ಅದರಂತೆ ನೀಡಿದ್ದೇನೆ. ಚುಚ್ಚುಮದ್ದು ನೀಡಿದ ಬಳಿಕವೂ ಮಗು ಚಿಕಿತ್ಸೆಗೆ ಸ್ಪಂದಿಸದೇ ಇರುವುದರಿಂದ ತಕ್ಷಣ ನಾನೇ ಅವರನ್ನು ಬೇರೆ ಆಸ್ಪತ್ರೆಗೆ ದಾಖಲು ಮಾಡಲು ಆಟೋ ಮುಖಾಂತರ ಕಳಿಸಿಕೊಟ್ಟೆ ಇರಲಿ ನನ್ನದೇನು ತಪ್ಪಿಲ್ಲ. ಎನ್ನುವುದು ಆಸ್ಪತ್ರೆಯ ನರ್ಸ್ ರವರ ಮಾತು.
ಈ ಬಗ್ಗೆ ವೈದ್ಯರನ್ನು ಕೇಳಿದ್ರೆ, ಮೃತ ಮಗುವಿನ ಪೋಷಕರ ಕುಟುಂಬದವರು ತುಂಬಾ ಚಿರಪರಿಚಿತರು. ಕಳೆದ 40 ವರ್ಷಗಳಿಂದ ಅವರ ಕುಟುಂಬದ ಆರೋಗ್ಯವನ್ನ ವಿಚಾರಿಸುತ್ತಿದ್ದೇನೆ. ಈ ಪ್ರಕರಣದ ಬಗ್ಗೆ ಅವರ ಸಮ್ಮುಖದಲ್ಲೇ ನಾನು ಮಾತನಾಡುತ್ತೇನೆ. ಮಗು ಎಂದ ಮೇಲೆ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಉಲ್ಬಣಿಸುತ್ತಿವೆ. ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಕೂಡ ನಾನು ಕೊಟ್ಟಿದ್ದೇನೆ ಅಷ್ಟೇ. ಚಿಕಿತ್ಸೆಯ ಮೇಲೆ ಏನಾದರೂ ಅನುಮಾನವಿದ್ದರೆ, ಅವರು ಕಾನೂನಿನ ಮೊರೆಹೋಗಲಿ. ಮಾನು ಕಾನೂನಿನ ಪ್ರಕಾರವೇ ಮಾತನಾಡುತ್ತೇನೆ ಎಂದು ಮೌನಕ್ಕೆ ಜಾರಿಕೊಂಡರು.
ಕಳೆದ 11 ತಿಂಗಳಿಂದ ಅಂಬೆಗಾಲಿಡುತ್ತಾ ಮುದ್ದುಮುದ್ದಾಗಿ ಮನೆಯಂಗಳದಲ್ಲಿ ಓಡಾಡಿಕೊಂಡು ಮನೆಮಂದಿಗೆಲ್ಲಾ ಖುಷಿ ನೀಡಿದ್ದ ಆ ಪುಟ್ಟ ಕಂದಮ್ಮ ಆ ಕುಟುಂಬಕ್ಕೆ ಇನ್ನು ನೆನಪು ಮಾತ್ರ. ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿ ಸಲಹಿ, ಇದ್ದ ಒಬ್ಬ ಮಗುವನ್ನು ಕಳೆದುಕೊಂಡ ಆ ಕರುಳಿನ ಸಂಕಟ ನಿಜಕ್ಕೂ ಯಾರಿಗೂ ಬರಬಾರದು.
ವೈದ್ಯರ ನಿರ್ಲಕ್ಷದಿಂದ 11 ತಿಂಗಳ ಮಗವೂಂದು ಸಾವಿಗೀಡಾಗಿರುವ ಘಟನೆ ಹಾಸನ ನಗರದ ಜಯಶೀಲ ಆಸ್ಪತ್ರೆಯಲ್ಲಿ ನಡೆದಿದೆ Featured
- - Sep 18, 2019
- - 0

About author

Kondi News
Email This email address is being protected from spambots. You need JavaScript enabled to view it.Leave a comment
Make sure you enter the (*) required information where indicated. HTML code is not allowed.