Kondi News

Kondi News

Email: This email address is being protected from spambots. You need JavaScript enabled to view it.

ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ಶಾಸಕರಾದ ಪಾಟಿಲ್ ಮತ್ತು ಯತ್ನಾಳ್‌ಗೆ ನೋಟಿಸ್ ನೀಡಿದ್ದಾರೆ ಅನ್ನುವುದು ಸರಿಯಲ್ಲ. ಯಾವ ಉದ್ದೇಶಕ್ಕೆ ಅವರಿಗೆ ನೋಟಿಸ್ ಕೊಟ್ಟಿದ್ದಾರೆ ಎಂಬುದನ್ನು ವಿಚಾರಿಸುವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

ನಗರದ ಖಾಸಗಿ ಶಾಲೆಯೊಂದರ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.‌ ಅವರಿಗೆ ಶೋಕಾಸ್ ನೊಟೀಸ್ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ.‌ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ನೋಟಿಸ್ ಎಂಬ ವ್ಯಾಖ್ಯಾನ ಸರಿಯಲ್ಲ ಎಂದರು.‌

ಕೇಂದ್ರ ಮತ್ತು ರಾಜ್ಯ ಸರ್ಕಾರದ ಲೆಕ್ಕಾಚಾರದ ಮಧ್ಯೆ ವ್ಯತ್ಯಾಸಗಳು ಆಗಿರಬಹುದು.ಪ್ರವಾಹದ ವೇಳೆ ಆಗಿರುವಂತ ಮೂಲ ಸೌಕರ್ಯಗಳ ಹಾನಿ ಹಿನ್ನಲೆಯಲ್ಲಿ ನಾವು ಕೇಂದ್ರ ಸರ್ಕಾರಕಕ್ಕೆ 38 ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎಂದು ನಮ್ಮ ತಂಡ ವರದಿ ನೀಡಿದೆ.ನಮ್ಮ ಬಳಿ ಇದ್ದಷ್ಡು ಹಣದಿಂದ ಈಗಾಗಲೇ ಪರಿಹಾರ ಕೆಲಸಗಳನ್ನು ನಾವೂ ಪ್ರಾರಂಭಿಸಿದ್ದೇವೆ. ಪ್ರಾರಂಭಿಕ ಹಂತದಲ್ಲಿ ಸಂತ್ರಸ್ತರಿಗೆ ಹಾಗೂ ಒಂದಿಷ್ಟು ಮನೆಗಳ ನಿರ್ಮಾಣಕ್ಕೂ ಹಣ ಕೊಟ್ಟಿದ್ದೇವೆ.ಆದರೆ ಶಾಶ್ವತ ಕೆಲಸಗಳನ್ನು ಮಾಡಲು ಭಾರಿ ಮೊತ್ತದ ಹದ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಮಧ್ಯಂತರ ನೆರೆ ಪರಿಹಾರದ‌ ಬಿಡುಗಡೆ ಮೊತ್ತಕ್ಕೆ ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿ ಯಾವ ಸಂದರ್ಭದಲ್ಲಿ ಏನೇನು ಹೇಳ್ತಾರೆ ಅನ್ನೊದು ಜಗತ್ತಿದೆ ಗೊತ್ತಿಲ್ಲ.‌ಆ ಬಗ್ಗೆ ನಾನು ವ್ಯಾಖ್ಯಾನ ಕೊಡುವ ಅಗತ್ಯವಿಲ್ಲ.‌ಹಾಗೆಯೇ ಸಿದ್ದರಾಮಯ್ಯ ಇಷ್ಟು ದಿನ ವ್ಯಾಕರಣ ಮೇಸ್ಟ್ರು ಆಗಿದ್ದವರು ಇದೀಗ ಈಗ ಹಿಸ್ಟರಿ ಮೇಸ್ಟ್ರು ಆಗೋಕೆ‌ ಹೊರಟಿದ್ದಾರೆ.‌ಇಂತಹ ಹೋಲಿಕೆ ಸಿದ್ದರಾಮಯ್ಯರ ರಾಜಕೀಯ ಧೋರಣೆಯನ್ನು ತೋರಿಸುತ್ತದೆ ಎಂದು ಮೋದಿ ಅವರು ಬಿಜೆಪಿ ಅವರಿಗಿಂತ ನನಗೆ ಕ್ಲೋಸ್ ಇದ್ದರು ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮೋದಿ ಹಿಟ್ಲರ್ ರಾಜಕಾರಣ ಮಾಡ್ತಿದಾರೆ ಎಂಬ ಸಿದ್ದರಾಮಯ್ಯರ ಆರೋಪಗಳಿಗೆ ಟಾಂಗ್ ನೀಡಿದರು.‌

ರಾಜ್ಯದಲ್ಲಿ‌ಸಿಎಂ ಪುತ್ರ ಆಡಳಿತ ಮಾಡ್ತಿದಾರೆ ಎಂಬ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪ‌ಕ್ಕೆ ಪ್ರತಿಕ್ರಿಯಿಸಿ, ಈ ಆರೋಪದಗಳಿಗೆ ಸಿಎಂ ಪುತ್ರ ಹಾಗೂ ಸಿಎಂ ಎಲ್ಲರೂ ಸ್ಪಷ್ಟನೆ ಕೊಟ್ಟಿದಾರೆ.ನಾವೇ ಆಡಳಿತ ಮಾಡುತ್ತಿರೋದು ಸಂವಿಧಾನೇತರ ವ್ಯಕ್ತಿಗಳು ಯಾರೂ ಆಡಳಿತ ಮಾಡ್ತಿಲ್ಲ ಎಂದರು.‌

ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಈ ವರ್ಷದಿಂದಲೇ 7 ನೇ ತರಗತಿಗೆ ಪಬ್ಲಿಕ್ ಪರಿಕ್ಷೆಯನ್ನು‌ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದೇವೆ.‌ಮುಂದಿನ ಬಾರಿಯಿಂದ ಪೂರ್ಣವಾಗಿ ಅಳವಡಿಸುತ್ತೇವೆ.‌ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದರು.‌

ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಇಂದು ಅಕ್ಷರಶಃ ಶಿಕ್ಷರಾಗಿದ್ರು‌ ಮಕ್ಕಳೊಂದಿಗೆ ಬೆರೆತು ನೀತಿ ಪಾಠ ಮಾಡಿದ್ರು.‌

ಮಡಿಕೇರಿ ತಾಲೂಕಿನ ಕತ್ತಲೆಕಾಡು-ಕ್ಲೋಸ್‌ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಹಾಗೂ ಶಿಥಿಲಾವಸ್ಥೆ ತಲುಪಿದ್ದ ಹಿನ್ನಲೆಯಲ್ಲಿ ಹಳೆ ವಿದ್ಯಾರ್ಥಿಗಳು ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಗಮನ ಸೆಳೆದಿದ್ದ ಹಿನ್ನಲೆಯಲ್ಲಿ ಭೇಟಿ ನೀಡಿ ಮಕ್ಕಳೊಂದಿಗೆ ಬೆರೆತು ನೀತಿಪಾಠ ಮಾಡಿದ್ರು.

ಮಕ್ಕಳೆ ನೀವು ಅಮ್ಮನನ್ನು ಮಮ್ಮಿ ಅಂತ ಕರೆಯಬೇಡಿ.‌ ಪ್ರೀತಿಯಿಂದ ಅಮ್ಮ ಅಂತ ಕರೆಯಿರಿ.‌ ಮಮ್ಮಿ ಇಂಗ್ಲೀಷ್‌ನಲ್ಲಿ ಅಂದರೆ ಶವ ಅಂತ ಅರ್ಥ. ನಮ್ಮ ಹೆತ್ತಮ್ಮನನ್ನು ಮಮ್ಮಿ ಅಂತ ಕರೆಯಬೇಕಾ? ಅಂತಾ ಸರ್ಕಾರಿ ಶಾಲೆ ಮಕ್ಕಳಿಗೆ ಟೀಚಿಂಗ್ ಮಾಡಿದ್ರು.‌ದಸರಾ ರಜೆ ಅವಧಿಯಲ್ಲಿ ಕಥೆ ಪುಸ್ತಕ ಓದಬೇಕು ಎಂದು ಕಿವಿಮಾತು ಹೇಳಿದ್ರು.‌

ಹಾಸನ: ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ಸಮರ್ಪಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಓ ಬಿ.ಎ ಪರಮೇಶ್ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಪ್ರತಿ ಇಲಾಖೆಗಳು ತಮಗೆ ನೀಡಿರುವ ಮಾಸಿಕ ಹಾಗೂ ವಾರ್ಷಿಕ ಗುರಿಗಳನ್ನು ನಿಗದಿತ ಸಮಯಕ್ಕೆ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಿಕ್ಷಣ ಇಲಾಖೆಯು ಕಳೆದ ಬಾರಿಯಂತೆ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ಜಿಲ್ಲೆ ಪ್ರಥಮ ಸ್ಥಾನ ಕಾಯ್ದುಕೊಳ್ಳಲು ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರಲ್ಲದೆ ಅತಿವೃಷ್ಠಿಯಿಂದ ಹಾನಿಯಾಗಿರುವ ಶಾಲಾ ಕಟ್ಟಡಗಳ ದುರಸ್ಥಿಗೆ ಶೀಘ್ರ ಕ್ರಮವಹಿಸುವಂತೆ ಸೂಚನೆ ನೀಡಿದರು. ಅಂಗನವಾಡಿಗಳಲ್ಲಿ ಮಕ್ಕಳ ಗೈರು ಹಾಜರಾತಿಗೆ ಕಾರಣ ಹಾಗೂ ಅದನ್ನು ಸರಿಪಡಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ಯೂ ಮತ್ತಿತರ ಖಾಯಿಲೆಗಳು ಗಣನೀಯವಾಗಿ ಕಡಿಮೆಯಾಗಬೇಕು ಆರೋಗ್ಯ ಇಲಾಖೆ ಇದಕ್ಕೆ ಪೂರಕ ತಯಾರಿ ಮಾಡಬೇಕು. ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಅಗತ್ಯವಿರುವ ಗ್ರಾಮಗಳಿಗೆ ನೀರು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅನರ್ಹ ಬಿ.ಪಿ.ಎಲ್ ಪಡಿತರ ಚೀಟಿದಾರರು ಸ್ವ-ಇಚ್ಚೆಯಿಂದ ಅವರ ಪಡಿತರ ಚೀಟಿಗಳನ್ನು ರದ್ದು ಪಡಿಸಲು ಸಹಕರಿಸಬೇಕು ಎಂದ ಅವರು ಈರುಳ್ಳಿಗೆ ಬಹು ಬೇಡಿಕೆ ಇದ್ದು ಬೆಲೆ ಹೆಚ್ಚಾಗಿರುವ ಕಾರಣ ಸಾರ್ವಜನಿಕರಿಗೆ ಸಮರ್ಪಕವಾಗಿ ಪೂರೈಸುವ ನಿಟ್ಟಿನಲ್ಲಿ ಮದ್ಯವರ್ತಿಗಳ ಹಾವಳಿ ನಿಯಂತ್ರಿಸಿ ಚಿಲ್ಲರೆ ಮಾರಾಟಗಾರರು 200 ಮತ್ತು ರಿಯಾಯಿತಿ ಮಾರಾಟಗಾರರು 500 ಕೆ.ಜಿ ಗಿಂತ ಹೆಚ್ಚು ಈರುಳ್ಳಿ ಶೇಖರಣೆಗೆ ಅವಕಾಶವಿರುವುದಿಲ್ಲ, ಮಿತಿ ಮೀರಿ ದಾಸ್ತಾನು ಮಾಡಿದಲ್ಲಿ ಕ್ರಮ ಜರೂಗಿಸಲಾಗುವುದು ಎಂದರು. 

ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಮಹೇಶ್ ಮತ್ತು  ಚಂದ್ರಶೇಖರ್ ಉಪಸ್ಥಿತರಿದ್ದರು.

ಹಾಸನ ಅ. 05: ನಗರದ ಹೊಳೆನರಸೀಪುರ ರಸ್ತೆಯಲ್ಲಿರುವ ಕೆ.ಎಸ್.ಬಿ.ಸಿ.ಎಲ್ ಮದ್ಯ ಮಳಿಗೆ-2 ರಲ್ಲಿ ಮಾರಾಟವಾಗದೇ/ ಹಳೆಯದಾದ 41 ರಟ್ಟಿನ ಪೆಟ್ಟಿಗೆ ಮತ್ತು 88 ಬಾಟೇಲ್‍ನಲ್ಲಿರುವ ಒಟ್ಟು 357.840 ಲೀಟರ್ಸ್ ಮದ್ಯದ ದಾಸ್ತಾನುಗಳನ್ನು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಹಾಸನ ಇವರ ನಡವಳಿ ಆದೇಶ ಸಂಖ್ಯೆ: ಇ ಎಕ್ಸ್ಸಇ / ಸಿ ಆರ್ ಎಂ / 64 / 2012 -13, ದಿನಾಂಕ :  03.10.2019 ರ ಆದೇಶದಂತೆ ಜಿ.ವಿ.ವಿಜಯಕುಮಾರ್ ಅಬಕಾರಿ ಉಪ ಅಧೀಕ್ಷಕರು, ಉಪ ವಿಭಾಗ ಹಾಸನ ಇವರ ನೇರ ಉಸ್ತುವಾರಿಯಲ್ಲಿ ಹಾಗೂ ರಾಜಶೇಖರ್ ಆರ್.ಕರಡಕಲ್ ಅಬಕಾರಿ ನಿರೀಕ್ಷಕರು, ಮದ್ಯ ಮಳಿಗೆ-2 ಹಾಸನ ಮತ್ತು ಜಗದೀಶ್ ಎನ್.ಡಿ ವ್ಯವಸ್ಥಾಪಕರು ಮದ್ಯ ಮಳಿಗೆ-2 ಹಾಸನ ಹಾಗೂ ಸುದ್ದಿ ಮಾಧ್ಯಮ ಮತ್ತು ಪಂಚನಾಮೆಯರುಗಳ ಸಮಕ್ಷಮದಲ್ಲಿ ನಾಶಪಡಿಸಲಾಗಿದೆ.

ಹಾಸನ: ಸಂಸದರು ಕರೆದಿದ್ದ ಸಭೆಯ ಬಳಿಕ ಅವರೇ ತರಿಸಿಕೊಟ್ಟ ಮಾಂಸಹಾರ ಊಟವನ್ನು ಸೇವಿಸುತ್ತಿದ್ದ ವೇಳೆ ಚಿತ್ರೀಕರಣ ಮಾಡಲು ಹೋಗಿ ಬಿಜೆಪಿ ಮುಖಂಡರು ಬಂಧಿತನಾಗಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರುಗಳ ಸಭೆಯನ್ನು ನಿನ್ನೆ ಹಾಸನ ಸಂಸದರು ಹೊಳೆನರಸೀಪುರದಲ್ಲಿ ಕರೆದಿದ್ದರು ಎನ್ನಲಾಗಿದೆ ಸಭೆಯ ಬಳಿಕ ಊಟ ಮಾಡಿಕೊಂಡು ಹೋಗಬೇಕು ಎಂಬ ಮನವಿಯ ಮೇರೆಗೆ ಸಂಸದರ ತರಿಸಿ ಕೊಟ್ಟಿದ್ದ ಮಾಂಸಹಾರಿ ಊಟವನ್ನು ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಮಾಡುತ್ತಿದ್ದ ಬೆಳೆ ಆಗಮಿಸಿದ ಬಿಜೆಪಿ ಮುಖಂಡ ನಾಗೇಶ್ ಮೊಬೈಲ್ನಲ್ಲಿ ಚಿತ್ರೀಕರಣ ಮಾಡುವಂತೆ ತನ್ನ ಸ್ನೇಹಿತರಿಗೆ ಹೇಳಿ ನಂತರ ಹೊರಬಂದು ಪೊಲೀಸ್ ಅಧಿಕಾರಿ ಜೊತೆ ಕೂಡ ಅಸಭ್ಯವಾಗಿ ವರ್ತನೆ ಮಾಡಿ ತಹಶೀಲ್ದಾರರ್ ರವರ ಆದೇಶದ ಮೇಲೆ ಆತನನ್ನ ಪೊಲೀಸರು ಬಂಧಿಸಿದ್ದರು.

ಸರ್ಕಾರಿ ಐಬಿಯಲ್ಲಿ ಸಂಸದರು ತರಿಸಿಕೊಟ್ಟ ಮಾಂಸಾಹಾರಿ ಊಟವನ್ನು ತಪ್ಪಾಗಿ ಅರ್ಥೈಸಿಕೊಂಡು ನಾವು ಮಧ್ಯಪಾನ ಮಾಡುತ್ತಿದ್ದೇವೆಂಬ ಸುಳ್ಳು ವದಂತಿಯನ್ನು ಹಬ್ಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಗೊಂದಲ ಸೃಷ್ಟಿಸಿದ್ದಾರೆ ಎಂಬುದು ತಹಶೀಲ್ದಾರರುಗಳ ಆರೋಪ.

ಹಿಂದೆ ತಮಕೂರಿನ ಕುಣಿಗಲ್‍ನಲ್ಲಿ ಇದೇ ರೀತಿ ಪಿಡಬ್ಲ್ಯೂಡಿ ಅಧಿಕಾರಿಗಳು ಸರ್ಕಾರಿ ಐಬಿಯಲ್ಲಿ ಪಾರ್ಟಿ ಮಾಡಿದ್ದರು. ಈಗ ಹಾಸನ ಜಿಲ್ಲೆಯ ಹೊಳೆನರಸೀಪುರ ಸರ್ಕಾರಿ ಐಬಿಯಲ್ಲಿ ಜಿಲ್ಲೆಯ ತಹಶೀಲ್ದಾರ್ ಗಳು ಸೇರಿ ಮಧ್ಯ ಹಾಗೂ ಮಾಂಸ ಸೇವಿಸುತ್ತಿದ್ದರು ಎನ್ನಲಾಗಿದೆ. ಈ ವಿಚಾರವನ್ನು ತಿಳಿದು ಬಿಜೆಪಿ ಮುಖಂಡ ನಾಗೇಶ್ ನೇರವಾಗಿ ಸರ್ಕಾರಿ ಐಬಿ ಒಳಗೆ ಹೋಗಿ ವಿಡಿಯೋ ಚಿತ್ರೀಕರಣ ಮಾಡಿ ಅವರಿಗೆ ಬೆದರಿಕೆ ಒಡ್ಡಿದ್ದಾನೆ.

ಈ ಘಟನೆ ಅ.4ನೇ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಈ ವೇಳೆ ಹೊಳೆನರಸೀಪುರ ತಾಲೂಕಿನ ತಹಶೀಲ್ದಾರ್ ಶ್ರೀನಿವಾಸ್, ಸಕಲೇಶಪುರ ತಹಶೀಲ್ದಾರ್ ರಕ್ಷಿತ್, ಹಾಸನ ತಹಶೀಲ್ದಾರ್ ಮೇಘನಾ, ಚನ್ನರಾಯಪಟ್ಟಣ ತಹಸಿಲ್ದಾರ್ ಮಾರುತಿ ಸೇರಿ ಒಟ್ಟು ಏಳು ಜನ ತಹಶೀಲ್ದಾರ್ ಗಳು ಸೇರಿಕೊಂಡು ಐಬಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದಾರೆ ಎಂಬ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪ್ರಾಥಮಿಕ ತನಿಖೆ ಹಿನ್ನೆಲೆಯಲ್ಲಿ ಹೊಳೆನರಸೀಪುರದ ಬಿಜೆಪಿ ಮುಖಂಡ ಅಣ್ಣೇಚಾಕನಹಳ್ಳಿಯ ಪುಟ್ಟಸ್ವಾಮಿ, ಎಂಬುವರ ಮನೆಯಲ್ಲಿ ಪಕ್ಷವಿದ್ದು ಹಬ್ಬದೂಟ ಮುಗಿಸಿಕೊಂಡ ಸಂಬಂಧಿಕರುಗಳಿಗೆ ಉಳಿದುಕೊಳ್ಳಲು ಸರ್ಕಾರಿ ವಸತಿಗೃಹದ ವ್ಯವಸ್ಥೆ ಮಾಡಲು ಪುಟ್ಟಸ್ವಾಮಿ ಜೊತೆ ದೇವರಾಜು, ಸುರೇಶ್ ಹಾಗೂ ನಾಗೇಶ್ ಸೇರಿದಂತೆ ಹಲವರು ಪ್ರವಾಸಿ ಮಂದಿರಕ್ಕೆ ಹೋದಾಗ ಬಾಡೂಟದ ಈ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ಬಂಧಿತನಾಗಿದ್ದ ನಾಗೇಶ್ ಗೆ ಪೊಲೀಸ್ ಠಾಣೆಯಲ್ಲಿಯೇ ಬೆಲ್ ದೊರೆತಿದ್ದು, ನಾಗೇಶ್ ಹೊರ ಬಂದಿದ್ದು, ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಮತ್ತಷ್ಟು ತನಿಖೆ ಮುಂದುವರಿಸಿದ್ದಾರೆ.

Page 1 of 28

Media News

  • Latest
  • Most popular
  • Trending
  • Most commented
Post by Kondi News
- Oct 05, 2019
ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ...
Post by Kondi News
- Oct 05, 2019
ಕೊಡಗು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ...
Post by Kondi News
- Sep 08, 2019
ಹಾಸನ: ತವರಿಗೆ ಹೋಗುವುದಾಗಿ ಅಮ್ಮ ಮಗ ಕಾಲುವೆಗೆ ಹಾರಿ ...
Has no content to show!

Visitors Counter

00554647
Today
This Month
Last Month
All days
56
56
5443
554647
Your IP: 66.249.66.146
2020-12-01 07:03

About

Newsletter

Subscribe with us your email
Top
We use cookies to improve our website. By continuing to use this website, you are giving consent to cookies being used. More details…