ಮಂಡ್ಯ /ಕೆ ಆರ್ ಪೇಟೆ : 73ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಅವಶ್ಯವಿರುವ ಟೇಬಲ್ ಚೇರ್ ಮತ್ತು ಪುಸ್ತಕಗಳನ್ನು ಸಮಾಜ ಸೇವಕ ಅಮಚಹಳ್ಳಿ ಮಹೇಶ್ ವಿತರಣೆ ಮಾಡಿದರು.
ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಮಚಹಳ್ಳಿ ಗ್ರಾಮದಲ್ಲಿ 73 ಸ್ವತಂತ್ರ ದಿನವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶಾಲಾಸಮಿತಿ ಅದ್ಯಕ್ಷ ಮೋಹನ್ ಧ್ವಜಾರೋಹಣ ಮಾಡಿ ನಂತರ ಮಕ್ಕಳಿಗೆ ದೇಶದ ಬಗ್ಗೆ ಮತ್ತು ಸ್ವತಂತ್ರ ಹೊರಟಗಾರರ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು. ನಂತರ ಶಾಲ ಮುಖ್ಯ ಶಿಕ್ಷಕ ಮೋಹನ್ ಮಾತನಾಡಿ ಮಕ್ಕಳಿಗೆ ದೇಶ ಪ್ರೇಮದ ಬಗ್ಗೆ ತಿಳಿ ಹೇಳಿದರು.
ನಂತರ ಸಮಾಜ ಸೇವಕ ಮಹೇಶ್ ಶಾಲಾಮಕ್ಕಳಿಗೆ ಉಪಯುಕ್ತ ಬೆಂಚ್ ಮತ್ತು ಟೇಬಲ್ ವಿತರಣೆ ಮಾಡಿದರು. ನಂತರ ಗ್ರಾಮದ ಬಸವೇಶ್ವರ ಯುವಕ ಮಂಡಳಿ ವತಿಯಿಂದ ಮಕ್ಕಳಿಗೆ ಬುಕ್ ,ಪೆನ್ ವಿತರಣೆ ಮಾಡಲಾಯಿತು. ಗ್ರಾಮದ ಮಂಜೇಗೌಡ ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿ ಹಂಚಿದರು. ಕಾರ್ಯಕ್ರಮದಲ್ಲಿ ,ಶ್ರೀಮತಿ ರೇಖಾ,ರಂಜನ್ ,ಮಂಜೇಗೌಡ,ಗೀರಿಶ್ ,ಅನಿತ ಮತ್ತು ಶಾಲಾ ಮಕ್ಕಳು ಗ್ರಾಮಸ್ಥರು ಹಾಜರಿದ್ದರು.