ಮಂಡ್ಯ: ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಸ್ವತಂತ್ರ ದಿನಾಚರಣೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಜನ್ಮ ದಿನಾಚರಣೆ ಅಂಗವಾಗಿ ವರ್ಧಮಾನ ಜೈನ ನೇತ್ರಾಲಯ ಅಸ್ಪತ್ರೆಯ ಸಹಕಾರದೊಂದಿಗೆ ಕಣ್ಣು ತಪಾಸಣೆ ಶಿಭಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುನ್ನೂರಕ್ಕೂ ಹೆಚ್ಚು ಜನರ ಕಣ್ಣು ತಪಾಸಣೆಯನ್ನು ನೆಡೆಸಿದರು ಅಗತ್ಯ ಇದ್ದವರಿಗೆ ಲೆನ್ಸ್, ಹಾಗೂ ಕನ್ನಡಕವನ್ನು ಉಚಿತವಾಗಿ ನೀಡಲಾಗುವು ಹಾಗೂ ಶಸ್ತ್ರ ಚಿಕಿತ್ಸೆಗೆ ಅಗತ್ಯದವರಗೆ ಆಸ್ಪತ್ರೆ ಬರುಲು ದಿನಾಂಕ ತಿಳಿಸುವುದಾಗಿ ವೈದರು ಸಲಹೆ ನೀಡಿದರು.
ಲಕ್ಷ್ಮೀಪುರ ಗ್ರಾಮದ ಕನಕ ಸೇವಾ ಸಮಿತಿ ಸಂಗೊಳ್ಳಿ ರಾಯಣ್ಣ ಯುವಕರ ಸಂಘದ ಸದಸ್ಯರು ಕಾರ್ಯಕ್ರಮವನ್ನು ಆಯೋಜಿಸಿದರು. ಕಾರ್ಯಕ್ರಮದಲ್ಲಿ ಸಂಘದ ಅದ್ಯಕ್ಷರು, ಉಪಾದ್ಯಕ್ಷರು, ಸದಸ್ಯರು, ನೂರಾರು ಸಾರ್ವನಿಕರು ಭಾಗವಯಿಸಿದರು.